ಆರೋಪ

ಮೈಸೂರು ಜಂಬೂ ಸವಾರಿ: ಆನೆ ಮಾವುತ, ಕವಾಡಿಗರನ್ನು ಮತ್ತೆ ಏಮಾರಿಸಿತಾ ಸರಕಾರ?

ದಶಕಗಳಿಂದ ಬೇಡಿಕೆ ಈಡೇರಿಕೆಗೆ ಸತಾಯಿಸುತ್ತಿರುವ ಅರಣ್ಯ ಇಲಾಖೆ ಬಗ್ಗೆ ಆರ್.ಕೆ.ಚಂದ್ರ ಆರೋಪ

ಕುಶಾಲನಗರ, ಅ 04:ವಿಜಯದಶಮಿ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಐತಿಹಾಸಿಕ‌ ಜಂಬೂ ಸವಾರಿ ಬುಧವಾರ ಜರುಗಲಿದೆ. ದಸರಾ ಎಂದರೆ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯ ರೂವಾರಿಗಳಾದ ಸಾಕಾನೆ ಗಳ‌ ಮಾವುತ, ಕವಾಡಿಗರ ಬೇಡಿಕೆಗಳನ್ನು ಈಡೇರಿಸುವಲ್ಲಿ ಅರಣ್ಯ ಇಲಾಖೆ ಇದುವರೆಗೆ ಕ್ರಮಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ. ಸಾಕಾನೆಗಳ‌ ನಿರ್ವಹಣೆ, ಕಾಡಾನೆಗಳನ್ನು ಹಿಡಿಯುವುದು, ಹುಲಿ, ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಮಾವುತ ಕವಾಡಿಗರ ಸಂಬಳ ಹೆಚ್ಚಳ, ಉದ್ಯೋಗ ಖಾಯಮಾತಿ ಬೇಡಿಕೆಗಳನ್ನು ಅರಣ್ಯ ಇಲಾಖೆ ಬದಿಗಿಟ್ಟಿದೆ. ಪ್ರತಿ ಬಾರಿ ದಸರಾ ಸಂದರ್ಭ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಸಹಜವಾಗಿದೆ.‌ಈ ಸಂದರ್ಭ ಆನೆಗಳನ್ನು ದಸಾರಕ್ಕೆ ಕರೆದೊಯ್ಯಲು‌ ನಿರಾಕರಿಸುವ ಮಾವುತ ಕವಾಡಿಗರ ಪೊಳ್ಳು ಭರವಸೆ ನೀಡುವ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿ ವರ್ಷ ಏಮಾರಿಸುತ್ತಾ ಬಂದಿದ್ದಾರೆ. ಈ‌ ಬಾರಿ ಕೂಡ ದುಬಾರೆಯಲ್ಲಿ ಹಲವು ಬಾರಿ ಸಭೆ ಸೇರಿ ದಸಾರ ಬಹಿಷ್ಕರಿಸಿದ್ದ ಮಾವುತ ಕವಾಡಿಗರನ್ನು‌ ಪುಸಲಾಯಿಸಿ ದಸರಾಗೆ ಕರೆದೊಯ್ಯಲಾಗಿದೆ. ಬುಧವಾರ ಕಳೆದ‌ ಬಳಿಕ ಇವರು ಮತ್ತೆ ಅರಣ್ಯ ಪಾಲು, ಇವರ ಬೇಡಿಕೆ ಅರಣ್ಯ ಕೂಗು. ಈ ಬಗ್ಗೆ ಆಕ್ರೋಷ ವ್ಯಕ್ತಪಡಿಸಿರುವ ಬುಡಕಟ್ಟು ಕೃಷಿಕರ ಸಂಘ ಪ್ರಮುಖ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಆರ್.ಕೆ.ಚಂದ್ರ, ದಶಕಗಳಿಂದ ಬೇಡಿಕೆಗಳನ್ನು ಈಡೇರಿಸಿವ ಬಗ್ಗೆ ಅರಣ್ಯ ಇಲಾಖೆ ಏಮಾರಿಸುತ್ತಾ ಬಂದಿರುವುದು ದುರಾದೃಷ್ಟೆ. ದಸರಾ ಕಳೆದ ಬಳಿಕ ಮಾವುತ ಕವಾಡಿಗರು ಮೂಲೆ ಗುಂಪಾಗಲಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!