ಕುಶಾಲನಗರ,ಅ 02: ಕೂಡುಮಂಗಳೂರು ಗ್ರಾ.ಪಂ ನ ಬಳಿ ಕೆಲವು ದಿನಗಳ ಹಿಂದೆ ಚರಂಡಿ ಸ್ವಚ್ಚತೆ ಮಾಡಲಾಗಿತ್ತು. ಆದರೆ ಚರಂಡಿಗೆ ಸ್ಲಾಬ್ ಅಳವಡಿಸದೇ ತೆರಳಿದ್ದು, ಕೂಡಲೇ ಸ್ಲಾಬ್ ಅಳವಡಿಸುವಂತೆ ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೂಡುಮಂಗಳೂರು ಗ್ರಾ.ಪಂ ಬಸವನತ್ತೂರು ವಾರ್ಡ್ ಗೆ ಒಳಪಡುವ ಚರಂಡಿಯನ್ನು ಇತ್ತೀಚೆಗೆ ಸ್ವಚ್ವಗೊಳಿಸಲಾಗಿತ್ತು. ಆದರೆ ಸ್ವಚ್ವಗೊಳಿಸಿ ೨೦ ದಿನಗಳು ಕಳೆದರೂ ಸ್ಲಾಬ್ ಅಳವಡಿಸಲಿಲ್ಲ ಎಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಹಾಗೂ ವಾರ್ಡ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಲಾಬ್ ಇಲ್ಲದೇ ರಸ್ತೆಬದಿಯಲ್ಲಿರುವ ಸಾರ್ವಜನಿಕರು ತಮ್ಮ ಮನೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕತ್ತಲಲ್ಲಿ ಜನರು ಬಿದ್ದು, ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಅಕ್ಕಪಕ್ಕದಲ್ಲಿ ಬಾಣಂತಿಯರು ಹಾಗೂ ಸಣ್ಣ ಪುಟ್ಟ ಮಕ್ಕಳಿದ್ದಾರೆ. ಚರಂಡಿಯಿಂದ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಇದರ ಬಗ್ಗೆ ಸಂಬಂಧಿಸಿದ ಕೂಡುಮಂಗಳೂರು ಪಂಚಾಯಿತಿ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಸ್ಥಳೀಯರಾದ ಸುಶೀಲ ಬೋಜಪ್ಪ ಹಾಗೂ ಲಕ್ಷ್ಮಿ, ಚರಂಡಿ ಸ್ವಚ್ಚಗೊಳಿಸಿ ತಿಂಗಳು ಕಳೆಯಲಿಕ್ಕಾಗಿದೆ. ಆದರೂ ಕೂಡಾ ಚರಂಡಿ ಸ್ಲಾಬನ್ನು ಮುಚ್ಚಿಲ್ಲ. ವಾರ್ಡ್ ನ ಸದಸ್ಯರು ಅಧ್ಯಕ್ಷರೇ ಆಗಿದ್ದಾರೆ. ಆದರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಗಮನಕ್ಕೆ ತಂದರೇ, ಪಿ.ಡಬ್ಲ್ಯೂ.ಡಿ ಅವರಿಗೆ ತಿಳಿಸುವಂತೆ ಹೇಳುತ್ತಾರೆ. ಗ್ರಾಮಸ್ಥರು ಜನಪ್ರತಿನಿಧಿಗಳ ಬಳಿ ಸಮಸ್ಯೆ ಹೇಳಿಕೊಂಡರೆ, ಅವರು ನೇರವಾಗಿ ಗ್ರಾಮಸ್ಥರೇ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ಹೇಳಿತ್ತಾರೆ. ಇಂತವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದ ಅವರು, ಕೂಡಲೇ ಸಮಸ್ಯೆ ಪರಿಹರಿಸಿಕೊಡಿ ಎಂದು ಆಗ್ರಹಿಸಿದ್ದಾರೆ.
Back to top button
error: Content is protected !!