ಕುಶಾಲನಗರ ಸೆ 28: ಚೈನಾ ಮೂಲದ ಜಿನ್‌ಜುನ್ ಕಿಯಾನ್‌ಬಾನ್ ಎಂಬ ಸಸ್ಯ ಪ್ರಬೇಧ ಮನೆಯಂಗಳದಲ್ಲಿ ಅರಳಿ ಸಹಸ್ರ ದಳದ ಸುಂದರ ತಾವರೆ ರೂಪ ಅರಳಿ ನಿಂತು ನೋಡುಗರನ್ನು ಆಕರ್ಷಿಸುತ್ತಿದೆ.
ಕೊಡಗಿನ ಪ್ರಥಮ ಎಂಬಂತೆ ಈ ತಾವರೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಸಿನಗುಪ್ಪೆ ಗ್ರಾಮದ ಪ್ರಗತಿ ಪರ ರೈತ ಟಿ.ಎಂ.ಬೇಬಿ ಅವರ ಮನೆಯಂಗಳದಲ್ಲಿ ಕಂಡುಬಂದಿದೆ.
ಸಾವಿರಕ್ಕೂ ಹೆಚ್ಚು ದಳಗಳನ್ನು ಬಿಡುವ ತಾವರೆ ಹೂವಿನ ಗೆಡ್ಡೆಯನ್ನು ಕೇರಳ ರಾಜ್ಯದ ತ್ರಿಷೂರ್ ನರ್ಸರಿ ಯಲ್ಲಿ ಬೆಳೆಸಲಾಗಿದೆ. ಚೈನಾ ದಿಂದ 2015 ರಲ್ಲಿ ಕೇರಳದ ವ್ಯಕ್ತಿಯೊಬ್ಬರು ಚೈನಾದಿಂದ ತರಿಸಿ ಟ್ರಬರ್ ನಾಟಿಯ ಮೂಲಕ ತಾವರೆ ಹೂವಿನ ತೊಟ್ಟಿಯಲ್ಲಿ ಬೆಳೆಸಲಾಗಿತು.
ಈ ಗೆಡ್ಡೆಯು ಎರಡು ವರ್ಷಗಳ ನಂತರ 2017 ರಲ್ಲಿ ಹೂ ಬಿಟ್ಟು ಸಾವಿರಕ್ಕೂ ಹೆಚ್ಚು ದಳಗಳನ್ನು ಹೊಂದಿರುವುದು ವಿಶೇಷವಾಗಿತು.
ಈ ಹೂವಿನ ಗೆಡ್ಡೆಯನ್ನು ಕೇರಳದಿಂದ ಪ್ರಥಮವಾಗಿ ಒಂದು ಗೆಡ್ಡೆಗೆ ಒಂದು ಸಾವಿರ ರೂ ನಂತೆ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಸಿನಗುಪ್ಪೆ ಗ್ರಾಮ ನಿವಾಸಿಯಾದ ,ಅಲೂರು ಸಿದ್ದಾಪುರ ರೋಟರಿ ಕ್ಲಬ್ ಅಧ್ಯಕ್ಷ , ತೊರೆನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾದ ಎಂ. ಟಿ.ಬೇಬಿ ಎಂಬುವರ ಮನೆಯ ಮುಂದಿನ ಸುಂದರ ನೀರಿನ ಟ್ಯಾಂಕ್ ನ ತಾವರೆ ತೋಟದಲ್ಲಿ ಬೆಳೆಸಲಾಗಿದೆ.
ನೀರಿನಲ್ಲಿ ಬೆಳೆಯುವ ತಾವರೆ ಗೆಡ್ಡೆಯು ಮೊದಲು ದೊಡ್ಡ ಗಾತ್ರದ ಎಲೆ ಬೆಳೆದು ನಂತರ ನೀರಿನಲ್ಲಿ ನಿಂತ ಮಾದರಿಯಲ್ಲಿ ಬೆಳೆಯುತ್ತಾ ಒಂದು ಎಲೆಗೆ ಒಂದು ಹೂವಿನಂತೆ ಮೊಗ್ಗು ಅರಳಿ 10 ದಿನಗಳವರೆಗೆ ಇದ್ದು ಹೆಚ್ಚು ಆಕರ್ಷಣೆಯಾಗಿರುತ್ತದೆ. ರಾಜ್ಯದ ಕೆಲವೆ ಪ್ರದೇಶದಲ್ಲಿ ಬೆಳೆಸಲಾಗಿದೆ.
ಆದರೆ ಕೊಡಗಿನಲ್ಲಿ ಪ್ರಥಮವಾಗಿ 2022 ರ ಜನವರಿಯಲ್ಲಿ ತಂದು ಬೆಳೆಸಲಾಗಿ ಇದೀಗ ಜಿಲ್ಲೆಯ ವಾತಾವರಣ ಈ ತಾವರೆ ಹೂವಿಗೆ ಅನುಕೂಲವಾಗಿರುವುದರಿಂದ ಎಂಟು ತಿಂಗಳುಗಳಲ್ಲಿಯೇ ಗಿಡದ ಮಾದರಿಯಲ್ಲಿ ಬೆಳೆದು ಸುಂದರವಾದ ಒಂದು ಹೂವಿನಲ್ಲಿ ಸಾವಿರಕ್ಕೂ ಹೆಚ್ಚು ದಳಗಳನ್ನು ಹೊಂದಿರುವ ತಾವರೆ ಹೂವನ್ನು ಅರಸಿನಗುಪ್ಪೆ ಬೇಬಿನವರ ಮನೆಯ ಮುಂಭಾಗ ತಾವರೆ ತೊಟ್ಟಿಯಲ್ಲಿ ಕಾಣಬಹುದಾಗಿದೆ.
Back to top button
error: Content is protected !!