ಕುಶಾಲನಗರ, ಸೆ 28: ಕುಶಾಲನಗರ ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
9 ದಿನವೂ ವಾಸವಿ ಮಾತೆಗೆ ಬಾಲಪ್ರಸೂತಿಕ, ವೃಷಭವಾಹಿನಿ, ಕಮಲವಾಹಿನಿ, ಮಯೂರವಾಹಿನಿ, ಅನ್ನಪೂರ್ಣೇಶ್ವರಿ, ಗಜವಾಹಿನಿ, ಸರಸ್ವತಿ, ಸಿಂಹವಾಹಿನಿ, ಮಹಿಷಮರ್ಧಿನಿ ಮತ್ತು ಸರ್ವಾಭರಣ ಅಲಂಕಾರಗಳನ್ನು ಮಾಡಲಾಗುವುದು ಎಂದು ಅಧ್ಯಕ್ಷ ಬಿ.ಎಲ್.ಉದಯಕುಮಾರ್ ತಿಳಿಸಿದರು.
ಕಳೆದ 3 ವರ್ಷಗಳಿಂದ ವಿಶ್ವದಲ್ಲಿ ಕೊರೊನ ಎನ್ನುವ ಹೆಮ್ಮಾರಿ ಎಲ್ಲಾ ತರಹದ ಆಚರಣೆಗಳಿಗೂ ತಡೆಯೊಡ್ಡಿತ್ತು. ಈ ಬಾರಿ ಆ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸಿ ನಿರ್ಭಿತಿಯಿಂದ ಹಬ್ಬಹರಿ ದಿನಗಳನ್ನು ಅದ್ದೂರಿಯಾಗಿ ಆಚರಿಸಲು ಅವಕಾಶವನ್ನು ದೇವರು ಒದಗಿಸಿದೆ. ದೇವಸ್ಥಾನದಲ್ಲಿ ಈ 9 ದಿನವೂ ಬೆಳ್ಳಿಗ್ಗೆ 7 ಗಂಟೆಗೆ ವಾಸವಿ ಮಾತೆಗೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ರಾತ್ರಿ 8.30 ಗಂಟೆಗೆ ಮಹಾಮಂಗಳಾರತಿ ನಡೆಸಿ ತೀರ್ಥಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು.
ದಸರಾ ಹಬ್ಬದ ವಿಶೇಷವಾಗಿ ದೇವಸ್ಥಾನದಲ್ಲಿ ವಿವಿಧ ರೀತಿಯ ಬೊಂಬೆಗಳನ್ನು ಜೋಡಿಸಲಾಗಿದೆ. ಸಾರ್ವಜನಿಕರು ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಪುನೀತರಾಗಬಹುದು ಎಂದರು.
ಅರ್ಚಕರಾದ ಗಿರೀಶ್ ಭಟ್, ಯೋಗೀಶ್ ಭಟ್, ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಎಸ್.ಎಂ.ಸತೀಶ್, ಎಂ.ಪಿ.ಸತ್ಯನಾರಾಯಣ, ಕೊಡಗು ಜಿಲ್ಲಾಧ್ಯಕ್ಷ ಬಿ.ಎಲ್.ಸತ್ಯನಾರಾಯಣ,
ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಬಿ.ಆರ್.ನಾಗೇಂದ್ರಪ್ರಸಾದ್ ಇತರರು ಉಪಸ್ಥಿತರಿದ್ದರು.
Back to top button
error: Content is protected !!