ಕುಶಾಲನಗರ, ಸೆ 27: ಕೊಡಗಿನಲ್ಲಿ ರಸ್ತೆ ಸಂಚಾರ ತೀರಾ ದುಸ್ಥರ ಎನಿಸಿದೆ. ಹದಗೆಟ್ಟ ರಸ್ತೆಗಳಲ್ಲಿ ವಾಹನ ಸಂಚಾರ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ.
ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದಿಂದ ಅಮ್ಮತ್ತಿಗೆ ತೆರಳುವ ಮಾರ್ಗ ಸಂಪೂರ್ಣ ಕಿತ್ತುಬಂದಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಈ ಮಾರ್ಗದಲ್ಲಿ ಖಾಸಗಿ ರೆಸಾರ್ಟ್ ವ್ಯಾಪ್ತಿಯಲ್ಲಿ 1 ಕಿಮೀ ಮಾತ್ರ ರಸ್ತೆ ದುರಸ್ಥಿ ಮಾಡಲಾಗಿದೆ. ಉಳಿದ 9 ಕಿಮೀ ಸಂಚಾರ ತೀರಾ ಹರಸಾಹಸದ ಕೆಲಸ ಎಂದು ಚಾಲಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಪಾಲಿಬೆಟ್ಟ ಟಾಟಾ ಸಂಸ್ಥೆ, ಕಾಫಿ ತೋಟಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹೆಚ್ಚಾಗಿ ಅಮ್ಮತ್ತಿಯ RIHP ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆದರೆ ತೀರಾ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತೆರಳಲು ಯಾವುದೇ ವಾಹನಗಳ ಲಭಿಸುತ್ತಿಲ್ಲ. ಕಾರಣ ಈ ರಸ್ತೆ ಅವ್ಯವಸ್ಥೆಯಿಂದ ಆಟೋ ಚಾಲಕರು ಕೂಡ ಈ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಇದರಿಂದ ತೀರಾ ನೊಂದಿರುವ ಬಡ ವರ್ಗ, ಜನಸಾಮಾನ್ಯರು ಆದಷ್ಟು ಬೇಗ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಕ್ಷೇತ್ರ ಶಾಸಕರನ್ನು ಆಗ್ರಹಿಸಿದ್ದಾರೆ.
Back to top button
error: Content is protected !!