ಅವ್ಯವಸ್ಥೆ

ಸರ್ವರ್ ಸಮಸ್ಯೆ: ಪಡಿತರ ಸಿಗದೆ ಜನಸಾಮಾನ್ಯರ ಪರದಾಟ

ಕುಶಾಲನಗರ, ಸೆ 27: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ನ್ಯಾಯ ಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ವಿಳಂಭ ಉಂಟಾಗಿದೆ.
ಒಂದು ದಿನದ ಕೂಲಿ ಕೆಲಸ ಬಿಟ್ಟು ಅಕ್ಕಿಗಾಗಿ ನ್ಯಾಯ ಬೆಲೆ ಅಂಗಡಿಗೆ ಬಂದರೆ ಸರ್ವರ್ ಇಲ್ಲದೆ ದಿನ ಪೂರ್ತಿ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ಜನಸಾಮಾನ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೇವಲ‌ ಕೂಡಿಗೆ ಮಾತ್ರವಲ್ಲದೆ ಕೂಡುಮಂಗಳೂರು ಭಾಗದಲ್ಲೂ ಕೂಡ ಇದೇ ಸಮಸ್ಯೆ ತಲೆದೋರಿದ್ದು
ಜನ ಸಾಮಾನ್ಯರಿಗೆ ತುಂಬಾ ಸಮಸ್ಯೆ ಎದುರಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಬೇಕು ಅಥವಾ ಪರ್ಯಾಯ ಮಾರ್ಗ ಬಳಸಿ ಪಡಿತರ ವಿತರಣೆ ಮಾಡಬೇಕು ಸಾರ್ವಜನಿಕರು ಆಹಾರ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!