ಕುಶಾಲನಗರ, ಸೆ 23: ಕೂಡುಮಂಗಳೂರು ಗ್ರಾ.ಪಂ ನ ನವಗ್ರಾಮಕ್ಕೆ ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಕೂಡುಮಂಗಳೂರು ಗ್ರಾ.ಪಂ ನ ನವಗ್ರಾಮಕ್ಕೆ ಭೇಟಿ ನೀಡಿದ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಕುಡಿಯುವ ನೀರು, ಬೀದಿ ದೀಪ ಹಾಗೂ ಚರಂಡಿ ಸ್ವಚ್ಚತೆ ಕಾರ್ಯ ಸರಿಯಾಗಿ ಆಗುತ್ತಿದೆಯೇ ಎಂದು ಜನರಿಂದ ಮಾಹಿತಿ ಪಡೆದರು.
ರಸ್ತೆ ಮತ್ತು ಚರಂಡಿಯಿಲ್ಲದೇ ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯರಾದ ಲೋಕೇಶ್ ಅವರು ಕೆ.ಬಿ.ಶಂಶುದ್ಧೀನ್ ಅವರ ಗಮನಕ್ಕೆ ತಂದರು. ಈವರೆಗೆ ಈ ಹಿಂದೆ ಇದ್ದ ಯಾವ ಜನಪ್ರತಿನಿಧಿಗಳು ಕೂಡಾ ರಸ್ತೆ, ಚರಂಡಿ ಮಾಡಿಸಿಕೊಟ್ಟಿಲ್ಲ. ಆದ್ದರಿಂದ ನಿಮ್ಮ ಅವಧಿಯಲ್ಲಿಯಾದರು ರಸ್ತೆ, ಚರಂಡಿ ಮಾಡಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು. ಈಗಾಗಲೇ ಇರುವ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಸಮರ್ಪಕವಾಗಿ ವಿನಿಯೋಗಿಸಲಾಗಿದೆ. ಆದಷ್ಟು ಬೇಗನೇ ರಸ್ತೆ ಹಾಗೂ ಚರಂಡಿ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ, ಫಲಾನುಭವಿಗಳು ಅದರ ಉಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ವಾರ್ಡನ್ನು ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು. ಶೇ.೨೫ ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಸೋಲಾರ್ ಲೈಟ್ ಹಾಗೂ ಒಲಿಗೆಯಂತ್ರ ಅವಶ್ಯಕತೆ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಪಂಚಾಯಿತಿಗೆ ಅರ್ಜಿ ಹಾಕುವಂತೆ ಮನವಿ ಮಾಡಿದರು. ಶೇ.೫ರ ಅನುದಾನದಲ್ಲಿ ವಿಕಲಚೇತನಿಗೆ ಸಹಾಯದನ ನೀಡಲಾಗುವುದು. ಇಂಗುಗುಂಡಿ, ಆಡಿನ ಕೊಟ್ಟಿಗೆ ಹಾಗೂ ದನದ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ನೀಡಲಾಗುತ್ತದೆ. ಆದ್ದರಿಂದ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ಜನರಿಗೆ ಮಾಹಿತಿ ನೀಡಿದ ಅವರು, ನಿವೇಶನವಿದ್ದು ಮನೆಯಿಲ್ಲದವರು ಹಾಗೂ ಹಲವಾರು ವರ್ಷಗಳಿಂದ ನಿವೇಶನವಿಲ್ಲದೇ ಬಾಡಿಗೆ ಮನೆಯಲ್ಲಿ ನೆಲೆಸಿರುವವರು ಸೂಕ್ತ ದಾಖಲಾತಿಗಳೊಂದಿಗೆ ಪಂಚಾಯಿತಿಗೆ ಅರ್ಜಿ ಹಾಕುವಂತೆ ಮನವಿ ಮಾಡಿದರು.
ಈ ಸಂದರ್ಭ ಗ್ರಾಮಸ್ಥರು ಇದ್ದರು.
Back to top button
error: Content is protected !!