ಕುಶಾಲನಗರ, ಸೆ 22: ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆ ಆರಂಭವಾಗುವ ಹಿನ್ನೆಲೆಯಲ್ಲಿ ಬೆಳೆಗಾರರ ಸಭೆಗೆ ತಂಬಾಕು ಮಂಡಳಿಯ ಹರಾಜು ನಿರ್ದೇಶಕರು ಸೇರಿದಂತೆ ಖರೀದಿ ಕಂಪನಿಗಳ ಮುಖ್ಯಸ್ಥರ ಗೈರನ್ನು ವಿರೋಧಿಸಿ ಹೊಗೆಸೊಪ್ಪು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿದರು.
ಬುಧವಾರದಂದು ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯ ರೈತ ಭವನದಲ್ಲಿ ಮಂಡಳಿವತಿಯಿAದ ಬೆಳೆಗಾರರು ಹಾಗೂ ತಂಬಾಕು ಖರೀದಿ ಕಂಪನಿಗಳ ಮುಖ್ಯಸ್ಥರ ಸಭೆ ಆಯೋಜಿಸಲಾಗಿತ್ತು. ಆದರೆ ಸಭೆಗೆ ಹರಾಜು ನಿರ್ದೇಶಕಿ, ಐಟಿಸಿ ಕಂಪನಿ ಸೇರಿದಂತೆ ಯಾವುದೇ ಕಂಪನಿಯ ಮುಖ್ಯಸ್ಥರು ಭಾಗವಹಿಸಿರಲಿಲ್ಲ. ಮಂಡಳಿಯ ಉಪಾಧ್ಯಕ್ಷ ಬಸವರಾಜು, ಸದಸ್ಯ ಹಬ್ಬನಕುಪ್ಪೆದಿನೇಶ್, ಪ್ರಾದೇಶಿಕ ವ್ಯವಸ್ಥಾಪಕ ಎಂ.ಲಕ್ಷö್ಮಣರಾವ್ ಹಾಗೂ ಸ್ಥಳೀಯ ಅಧೀಕ್ಷಕರುಗಳು ಮಾತ್ರ ಭಾಗವಹಿಸಿದ್ದರು.
ಸಭೆ ಆರಂಭವಾಗುತ್ತಿದ್ದAತೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಶಿವಣ್ಣೇಗೌಡ,ಚಂದ್ರೇಗೌಡ, ರೈತ ಮುಖಂಡರಾದ ಅಶೋಕ್, ದೇವರಾಜ್, ಶ್ರೀಧರ, ಶ್ರೀನಿವಾಸ್, ಎ.ಪಿ.ಸ್ವಾಮಿ, ಮರೂರುಚಂದ್ರಶೇಖರ್ ಮತ್ತಿತರ ಬೆಳೆಗಾರರು ಸಂಸದ, ಶಾಸಕರು ಬಂದಿಲ್ಲ, ಹರಾಜು ನಿರ್ದೇಶಕರಂತೂ ಯಾವ ಬೆಳೆಗಾರರ ಸಭೆಗೂ ಬರುತ್ತಿಲ್ಲಾ, ಇನ್ನು ಗುಂಟೂರಿನಲ್ಲಿರುವ ಕಾರ್ಯನಿರ್ವಾಹಕ ನಿರ್ದೇಶಕರೂ ಸಹ ಈವರೆವಿಗೂ ಕರ್ನಾಟಕ್ಕೆ ಬಂದಿಲ್ಲ. ಇಲ್ಲಿನ ಸಮಸ್ಯೆಗಳಿಗೆ ಜವಾಬ್ದಾರಿ ಹೊರುವವರು ಯಾರು, ಅವರು ಬರುವವರೆಗೂ ಸಭೆ ನಡೆಸುವುದೇ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿ ಸಭೆ ಬಹಿಷ್ಕರಿಸಿ ಮಂಡಳಿ ವಿರುದ್ದ ಪ್ರತಿಭಟಿಸಿದರು.
ಹಿರಿಯ ಅಧಿಕಾರಿಗಳು ಬರಲೇ ಬೇಕು:
ಈವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಅತಿಯಾದ ಮಳೆಯಿಂದ ತಂಬಾಕು ಇಳುವರಿ ಸಾಕಷ್ಟು ಕಡಿಮೆಯಾಗಿದೆ. ರಸಗೊಬ್ಬರವನ್ನು ಮೂರು-ನಾಲ್ಕು ಬಾರಿ ನೀಡಿದ್ದಾರೆ. ಇಂತ ಕಷ್ಟದ ಸಂದರ್ಭದಲ್ಲಿ ಬೆಳೆಗಾರರ ಸಂಕಷ್ಟಕ್ಕೆ ನಿಲ್ಲಬೇಕಾದ ತಂಬಾಕು ಮಂಡಳಿಯ ಹಿರಿಯ ಅಧಿಕಾರಿಗಳು ಕನಿಷ್ಟ ಹಾನಿ ಸ್ಥಳಕ್ಕೂ ಸೌಜನ್ಯದ ಭೇಟಿ ನೀಡಿಲ್ಲ. ಕನಿಷ್ಟ ಗೊಬ್ಬರ ಹಾಗೂ ಬೆಳೆ ಸಾಲ ಮನ್ನಾ ಮಾಡುವ ನಿಟ್ಟಿನಲ್ಲೂ ಪ್ರಯತ್ನ ನಡೆಸಿಲ್ಲ. ಹರಾಜು ನಿರ್ದೇಶಕರಂತೂ ರೈತವಿರೋಧಿಯಾಗಿದ್ದಾರೆ. ಹರಾಜಿಗೂ ಮುನ್ನ ಸಭೆಗೆ ಸಂಸದ, ಶಾಸಕರು, ಮಂಡಳಿಯ ಹಿರಿಯ ಅಧಿಕಾರಿಗಳು ಬರಲೇಬೇಕು. ಇಲ್ಲದಿದ್ದಲ್ಲಿ ಹರಾಜು ಮಾರುಕಟ್ಟೆ ಆರಂಭವಾಗಲು ಬಿಡಲ್ಲವೆಂದು ಎಚ್ಚರಿಸಿದರು.
ಕಟ್ಟೆಮಳಲವಾಡಿ ಶ್ರೀಧರ್ ಬೆಂಗಳೂರಿನ ಹರಾಜು ನಿರ್ದೇಶಕರ ಕಚೇರಿಯನ್ನು ಮೈಸೂರಿಗೂ, ಮೈಸೂರಿನ ಆರ್.ಎಂ.ಓ.ಕಚೇರಿಯನ್ನು ಹುಣಸೂರಿಗೂ ಸ್ಥಳಾಂತರಿಸಲು ಕ್ರಮವಹಿಸುವಂತೆ ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಿಮ್ಮ ಅವಧಿಯಲ್ಲಾದರೂ ಸ್ಥಳಾಂತರಕ್ಕೆ ಕ್ರಮವಹಿಸಿ. ಉತ್ತಮ ಬೆಲೆಕೊಡಿಸಲು ಮುಂದಾಗಿರೆAದು ಮಂಡಳಿ ಉಪಾಧ್ಯಕ್ಷ ಬಸವರಾಜುರಲ್ಲಿ ಮನವಿ ಮಾಡಿದರು. ಕಚೇರಿ ಸ್ಥಳಾಂತರ ಪ್ರಸ್ತಾವನೆ ಮಂಡಳಿ ಮುಂದಿದ್ದು, ಕ್ರಮವಹಿಸಲಾಗುವುದೆಂದು ಭರವಸೆ ಇತ್ತರು.
Back to top button
error: Content is protected !!