ಕುಶಾಲನಗರ, ಸೆ 22: ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಗುರುವಾರ ನಡೆಯಿತು.
ಈ ವೇಳೆ ವಾರ್ಷಿಕ ಸಭೆಯಲ್ಲಿ ಮೈಮುಲ್ ನಿರ್ದೇಶಕ ಎಚ್ ಡಿ ರಾಜೇಂದ್ರಪ್ಪ ಮಾತನಾಡಿ ಸಂಘದ ಸದಸ್ಯರು ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ, ಹೆಚ್ಚಿನ ಆದಾಯ ಗಳಿಸಿ, ತಮ್ಮ ಆರ್ಥಿಕ ಮಟ್ಟವನ್ನು ಇನ್ನಷ್ಟು ಸುಧಾರಿಸಿಕೊಂಡು ಜಿಲ್ಲೆಯಲ್ಲಿಯೇ ನವಿಲೂರು ಹಾಲು ಉತ್ಪಾದಕರ ಸಂಘವನ್ನು ಮಾದರಿ ಸಂಘವನ್ನಾಗಿ ಹೊರ ಹುಮ್ಮಲು ಸದಸ್ಯರು ಪ್ರಯತ್ನ ಅತಿ ಮುಖ್ಯವಾದದ್ದು ಎಂದು ತಿಳಿಸಿದರು,
2021 22ರ ಸುಮಾರು 6,85,17 ಲಾಭವನ್ನು ಪಡೆದಿರುವ ಈ ಗ್ರಾಮದ ಸಂಗವು ಮುಂದಿನ ದಿನಗಳಲ್ಲಿ ಕನಿಷ್ಠ 10 ಲಕ್ಷದವರೆಗೆ ಲಾಭ ಪಡೆಯುವಷ್ಟು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಲಹೆ ನೀಡಿದರು,
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ್ ಮಾತನಾಡಿ ಸಹಕಾರ ಸಂಘ ವೆಂದರೆ ಸರ್ವರಿಗೂ ಸಮಭಾಗಿತ್ವ ನೀಡುವಂತ ಸಂಘವಾಗಿರಬೇಕು, ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ, ತಾರತಮ್ಯ ಮಾಡದೆ, ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವಂತೆ ಇದೆ ವೇಳೆ ಅಧ್ಯಕ್ಷರಿಗೆ ತಾಕಿದ್ದು ಮಾಡಿದರು.
ವರ್ಷದಲ್ಲಿ ಅತಿ ಹೆಚ್ಚು ಹಾಲು ನೀಡಿದ ಸದಸ್ಯರಿಗೆ ಇದೆ ವೇಳೆ ಕಿರು ಹುಡುಗರೆಯನ್ನು ನೀಡುವುದರೊಂದಿಗೆ ಅವರನ್ನು ಸನ್ಮಾನಿಸಲಾಯಿತು.
2021 22ರ ಲೆಕ್ಕಪರಿಶೋಧನೆಯನ್ನು ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ನಿಶ್ಚಿತ್ ರವರು ಸಭೆಯಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ನವಿಲೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವರಾಜು, ಉಪಾಧ್ಯಕ್ಷ ಈ ರಾಜು, ನಿರ್ದೇಶಕರಾದ ಜವರಯ್ಯ, ಕುಳ್ಳಯ್ಯ, ಕುಂಟೆಯ, ಶಿವರಾಜು, ಸುಬ್ಬನಾಯಕ, ನಿಂಗರಾಜು, ಅರುಣ್ ಕುಮಾರ್, ಚಂದ್ರಪ್ಪ, ರಾಜಮಣಿ ಕಮಲಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು, ಹಾಲು ಪರೀಕ್ಷೆ ಕ ಚಂದ್ರು, ಸಹಾಯಕ ಅರವಿಂದ್,
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ್, ಪಿಡಿಒ ರವಿ, ಉಪಾಧ್ಯಕ್ಷ ಸರೋಜಾ, ಸದಸ್ಯರುಗಳಾದ ಚೆಲುವರಾಜು, ಮಂಜುಳಾ, ಶಾಂತಮ್ಮ, ಯಶೋದಮ್ಮ, ಬಸವರಾಜು, ಗ್ರಾಮಸ್ಥರು ಇದ್ದರು
Back to top button
error: Content is protected !!