ಕುಶಾಲನಗರ, ಸೆ 22: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ವಿಮಲ ಅವರ ಅಧ್ಯಕ್ಷೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡಕ್ಕೆ ಒಕ್ಕೂಟದ ವತಿಯಿಂದ ಈ ಸಾಲಿನಲ್ಲಿ 8 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದರು. ಸಂಘದ ದಾಖಲೆಯನ್ನು ಸಮರ್ಪಕವಾಗಿ ಒದಗಿಸಿದರೆ ಒಕ್ಕೂಟದ ತೀರ್ಮಾನದಂತೆ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿದ್ದ ಒಕ್ಕೂಟದ ವಿಸ್ತಾರಣಾಧಿಕಾರಿ ಬಿ. ವಿ. ವೀಣಾ ಮಾತನಾಡಿ, ಒಕ್ಕೂಟದ ವತಿಯಿಂದ ರೈತರ ಹಸುಗಳನ್ನು ಉಚಿತವಾಗಿ ತಪಾಸಣೆ, ಔಷಧೋಪಚಾರ ಮಾಡಿಕೊಡಲಾಗುವುದು. ನಿಗದಿತ ಸಮಯದಲ್ಲಿ ಪಶು ಆಹಾರವನ್ನು ಒದಗಿಸಲಾಗುವುದು ಎಂದರು. ಹಾಲಿನ ಗುಣಮಟ್ಟ ಹೆಚ್ಚಲು ಬೇಕಾಗುವ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ರೋವಿನ್, ನಿರ್ದೇಶಕರಾದ ಜಮುನಾ, ಪುಟ್ಟಮ್ಮ, ರತ್ನಮ್ಮ, ಉಮಾ, ಪೂರ್ಣಿಮಾ, ಸುಮಾ, ಕಾರ್ಯದರ್ಶಿ ಜಾನಕಿ ಸೇರಿದಂತೆ ಮಹಿಳಾ ಸದಸ್ಯರು ಹಾಜರಿದ್ದರು.
Back to top button
error: Content is protected !!