ಕುಶಾಲನಗರ, ಸೆ 18: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್.ಅನಂತಕುಮಾರ್ ನೇತೃತ್ವದ ನಿಯೋಗ ಪಕ್ಷದ ಹಿರಿಯರಾದ ಮಾಜಿ ಮು.ಮಂ ವಿಪಕ್ಸಿಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ತಮಗೆ ಉಂಟಾದ ಅನ್ಯಾಯದ ಬಗ್ಗೆ ಗಮನ ಸೆಳೆದರು.
ಮೈಸೂರಿಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಹಾಗೂ ಕೊಡಗು ಜಿಲ್ಲಾ ಪ್ರಮುಖರೊಂದಿಗೆ ನಿಯೋಗ ತೆರಳಿದ ಬಗ್ಗೆ ಮಾಹಿತಿ ನೀಡಿದ ಅನಂತಕುಮಾರ್ ಅವರು, ಕೆಲವು ಪಟ್ಟಭದ್ರ ಶಕ್ತಿಗಳ ಪಿತೂರಿಯಿಂದ ತನಗೆ ಉಂಟಾಗಿರುವ ಅನ್ಯಾಯದ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಲಾಗಿದೆ. ತಾನು 2 ವರ್ಷ 9 ತಿಂಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದುಡಿದ ಪಕ್ಷ ಕಟ್ಟಲು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ವರದಿ ನೀಡದ್ದೇನೆ. ಕೆಲವರು ಪಿತೂರಿ ನಡೆಸಿ ನನ್ನ ಪದಚ್ಯತಿಗೆ ಕಾರಣವಾಗಿರುವ ಬಗ್ಗೆ ತಿಳಿಸಿದ್ದು, ತನಗೆ ಅನ್ಯಾಯವಾಗಿದ್ದರೂ ಕೂಡ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು. ಎಲ್ಲವನ್ನೂ ಆಲಿಸಿದ ವರಿಷ್ಠರಿಂದ ಸೂಕ್ತ ಸ್ಪಂದನೆ ದೊರೆತಿದೆ. ಪಕ್ಷಕ್ಕಾಗಿ ಯಾವುದೇ ಅಧಿಕಾರದಲ್ಲಿ ಮುಂದುವರೆಯುವುದಾಗಿ ಅವರು ತಿಳಿಸಿದರು.
200 ಕ್ಕೂ ಅಧಿಕ ಮಂದಿಯ ನಿಯೋಗದಲ್ಲಿ ಜನಪ್ರತಿನಿಧಿಗಳು ಹಾಗೂ ಪ್ರಮುಖರಾದ
ಶರೀಫ್ ಇಬ್ರಾಹಿಂ, ರಫೀಕ್ ಇಬ್ರಾಹಿಂ
ಚಂದ್ರಶೇಖರ್, ಮಂಜುನಾಥ್, ಹರೀಶ್ ವಿ.ಜೆ.
ಮೋಹನ್ ರಾಜ್, ವಿ.ತಸ್ಲಿಂ, ವೀರೇಂದ್ರ ಕುಮಾರ್, ಬಿ.ಕಿಶೋರ್ ಕುಮಾರ್, ಸುರೇಶ್, ಹೂವಯ್ಯ, ಗೀತಾ ಧರ್ಮಪ್ಪ ಮತ್ತಿತರರು ಇದ್ದರು.
Back to top button
error: Content is protected !!