ಕ್ರೈಂ

25 ಲಕ್ಷ ಮೌಲ್ಯದ ಮೊಬೈಲ್ ಚಾರ್ಜರ್‌ ಗೋಲ್ಮಾಲ್: ಕುಶಾಲನಗರದ ನಾಲ್ವರ ಬಂಧನ

ಕುಶಾಲನಗರ, ಸೆ 18: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಪಲ್ ಕಂಪನಿ ಸೇರಿ ವಿವಿಧ ಕಂಪನಿಗಳ‌ ಮೊಬೈಲ್ ಚಾರ್ಜರ್ ಗಳನ್ನು ಬದಲಿಸಿ ನಕಲಿ ಚಾರ್ಜರ್ ಗಳನ್ನು ಕಂಪನಿಗೆ ಶಿಪ್ಮೆಂಟ್ ಮೂಲಕ ಕಳಿಸಿ 25 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಖಾಸಗಿ ಡೆಲಿವರಿ‌ ಲಿಮಿಟೆಡ್ ನ ಸೆಕ್ಯುರಿಟಿ‌ ಮೇನೇಜರ್ ಯಶವಂತ್ ಅವರ ದೂರಿನಂತೆ, 09.05.22 ರಿಂದ 23.08.22 ರ ನಡುವೆ ಹಾಸನದ ವೇರ್ ಹೌಸ್ ಮೂಲಕ ರವಾನಿಸಿದ ಪಾರ್ಸೆಲ್ ಗಳನ್ನು ಡೆಲಿವರಿ ಬಾಯ್ ಗಳು ಬದಲಾಯಿಸಿ ವಂಚಿಸಿರುವ ಬಗ್ಗೆ ದೂರು ದಾಖಲಿಸಿದ್ದರು.
ಇದರನ್ವರ ತನಿಖೆ ನಡೆಸಿ ಆರೋಪಿಗಳಾದ ಮಂಗಳೂರಿನ ಸುರತ್ಕಲ್ ನ ಹಿತೇಶ್ ರೈ, ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಬೊಳ್ಳೂರಿನ ಎಸ್.ಆರ್.ಧರ್ಮ, ರಂಗಸಮುದ್ರ ಗ್ರಾಮದ ತೀರ್ಥೆಶ್ ರೈ, ಕುಶಾಲನಗರ ಆದಿಶಂಕರಾಚಾರ್ಯ ಬಡಾವಣೆಯ ಎಂ.ಟಿ.ಕೀರ್ತನ್, ಶಿರಂಗಾಲದ ಎಸ್.ಆರ್.ವಿನಯ್ ಎಂಬವರುಗಳನ್ನು‌ ಬಂಧಿಸಲಾಗಿದೆ.
ಬಂಧಿತರಿಂದ 14, 10, 000 ರೂ ನಗದು, 73,500 ರೂ ಮೌಲ್ಯದ ಆಪಲ್ ಕಂಪನಿಗೆ ಸೇರಿದ ಒರಿಜಿನಲ್ ಮೊಬೈಲ್ ಚಾರ್ಜರ್, 16 ಬಾಕ್ಸ್ ನಕಲಿ‌ ಮೊಬೈಲ್ ಚಾರ್ಜರ್ ಗಳು, ಕೃತ್ಯಕ್ಕೆ‌ ಬಳಸಿದ 3 ಮೊಬೈಲ್, ಚಾಕು, ಪ್ಲಾಸ್ಟರ್ ಗಳನ್ನಹ ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ಎ.ಅಯ್ಯಪ್ಪ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ‌ವಿಭಾಗದ ಅಧೀಕ್ಷಕರಾದ ಆರ್.ವಿ.ಗಂಗಾಧರಪ್ಪ‌ ನೇತೃತ್ವದಲ್ಲಿ ಕುಶಾಲನಗರ ವೃತ್ತ‌ ನಿರೀಕ್ಷಕರಾದ ಬಿ.ಜಿ.ಮಹೇಶ್, ಠಾಣಾಧಿಕಾರಿ ಅಪ್ಪಾಜಿ, ಪ್ರೊ. ಪಿಎಸ್ ಐ ಕಾಶಿನಾಥ ಬಗಲಿ, ಎಎಸ್ ಐ ಗಣಪತಿ, ಸಿಬ್ಬಂದಿಗಳಾದ ಜಯಪ್ರಕಾಶ್, ಸಂದೀಪ್, ಅರುಣ್ ಕುಮಾರ್, ಮನೋಜ್ ಕುಮಾರ್, ಸಿದ್ದರಾಜು, ಸೌಮ್ಯ, ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್, ಚಾಲಕ ಯೋಗೇಶ್, ಕಾರ್ಯಾಚರಣೆಯಲ್ಲಿ‌ ಪಾಲ್ಗೊಂಡಿದ್ದರು. ತಂಡಕ್ಕೆ ಜಿಲ್ಲಾ ಅಧಿಕ್ಷಕರು ಬಹುಮಾನ‌ ಘೋಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!