ಮನವಿ

ಕನ್ನಡ ವೃತ್ತ ಮರು ನಾಮಕರಣಕ್ಕೆ ಕಸಾಪ ತಾ. ಅಧ್ಯಕ್ಷ ಕೆ.ಎಸ್.ಮೂರ್ತಿ ಆಗ್ರಹ

ಹಿಂದಿನ ಹೆಸರನ್ನೇ ಪುನರ್ ನಾಮಕರಣ ಮಾಡಿ ನಾಮಫಲಕ ಅಳವಡಿಸಲು ಒತ್ತಾಯ

ಕುಶಾಲನಗರ, ಸೆ 02 : ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಮುಂಬದಿಯಲ್ಲಿರುವ ವೃತ್ತಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯು ಕನ್ನಡ ವೃತ್ತ ಎಂದು ಮರು ನಾಮಕರಣ ಮಾಡಬೇಕೆಂದು ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪಟ್ಟಣ ಪಂಚಾಯಿತಿಯನ್ನು ಆಗ್ರಹಿಸಿದ್ದಾರೆ.
ದಶಕಗಳಿಂದಲೂ ಈ ವೃತ್ತ ಕನ್ನಡ ವೃತ್ತವಾಗಿಯೇ ಇತ್ತು. ಯಾವಾಗಲೂ ಈ ವೃತ್ತದಲ್ಲಿ ಕನ್ನಡ ಧ್ವಜ ಹಾರಾಡುತ್ತಿತ್ತು.
ಇದು ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಿರ್ವಹಣೆ ಗೊಳ್ಳುತ್ತಿತ್ತು.
ಜೊತೆಗೆ ಇದೇ ವೃತ್ತದಲ್ಲಿ ಸುಭಾಶ್ ಚಂದ್ರ ಭೋಸ್ ವೃತ್ತ ಎಂಬ ಕಲ್ಲಿನ ನೆಡುಕಂಭವೂ ಇತ್ತು.
ಆದರೆ ಈಗ ಈ ವೃತ್ತವನ್ನು ಸ್ಥಳೀಯ ಸಹಕಾರ ಸಂಘವೊಂದರ ಹೆಸರಿಡಲು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಈ ಹಿಂದೆ ಇದ್ದಂತಹ ಹೆಸರನ್ನೇ ಪುನರ್ ನಾಮಕರಣ ಮಾಡಿ ನಾಮಫಲಕ ಅಳವಡಿಸಬೇಕೆಂದು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಒತ್ತಾಯಿಸಿದ್ದಾರೆ.
ಸರ್ವ ಧರ್ಮ, ಸರ್ವ ಭಾಷಿಗರು ಹಾಗು ಸರ್ವ ಜನಾಂಗದವರು ವಾಸಿಸುತ್ತಿರುವ ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ನಾಡು – ನುಡಿ, ಕನ್ನಡ ಭಾಷೆ ಹಾಗು ಸಂಸ್ಕ್ರತಿಯ ಪರಂಪರೆಯನ್ನು ಎತ್ತಿ ಹಿಡಿಯುವ ಕನ್ನಡ ವೃತ್ತವನ್ನು ನಿರ್ಮಾಣ ಮಾಡಬೇಕೆಂಬುದು ಅವರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!