ಕುಶಾಲನಗರ, ಆ 19: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಸಂಬಂಧ ಕುಶಾಲನಗರದ 9 ಮಂದಿ ವಿರುದ್ದ ಪ್ರಕರಣ ದಾಖಲಿಸಿ ಬಿಡುಗಡೆಗೊಳಿಸಲಾಯಿತು.
ಪಕ್ಷ ಅಥವಾ ಸಂಘಟನೆಗೆ ಸಂಬಂಧವಿಲ್ಲದ ಮೂರನೇ ವ್ಯಕ್ತಿಯೊಬ್ಬ ಕಾರಿಗೆ ಮೊಟ್ಟೆ ಎಸೆದು ಪ್ರತಿಭಟನೆ ದಿಕ್ಕು ತಪ್ಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿಗರ ಪ್ರತಿಭಟನೆ ನ್ಯಾಯಯುತವಾಗಿತ್ತು. ಆದರೆ ಮೊಟ್ಟೆ ಎಸೆದದ್ದು ಬೇರಯವರು ಎಂದು ಶಾಸಕ ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಈ ಸಂಬಂಧ ಸೋಮವಾರಪೇಟೆಯ ವ್ಯಕ್ತಿಯ ಮೇಲೆ ಪೊಲೀಸರು ನಿಗಾವಹಿಸಿದ್ದು ಹೆಚ್ಚಿನ ವಿಚಾರಣೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ಇನ್ನು ಪ್ರತಿಭಟನೆ ಸಂದರ್ಭ ಅತಿರೇಕ ವರ್ತನೆ ಕಾರಣ ಕೂಡುಮಂಗಳೂರು ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸೋಮವಾರಪೇಟೆ ಮಂಡಲ ವಕ್ತಾರ ಕೆ.ಜಿ.ಮನು ಎಂಬವರನ್ನು ಪ್ರತಿಭಟನಾ ಸ್ಥಳದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಇವರೊಂದಿಗೆ ಸ್ವಯಂ ಪ್ರೇರಿತರಾಗಿ ಬಂದ ಇತರೆ 7 ಮಂದಿ ಸೇರಿ 9 ಮಂದಿ ವಿರುದ್ದ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರ ಪರವಾಗಿ ಕೊಡಗು ಜಿಲ್ಲಾ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಠಾಣೆಗೆ ಆಗಮಿಸಿ ಬಿಡುಗಡೆಗೊಳಿಸುವಲ್ಲಿ ಮುಂದಾಳತ್ವ ವಹಿಸಿದರು.
ಮೊಟ್ಟೆ ಒಡೆದ ವ್ಯಕ್ತಿ ಅಸ್ವಸ್ಥತೆ ಕಾರಣದಿಂದ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.