ಕುಶಾಲನಗರ, ಅ 09: ಕೂಡ್ಲೂರು ಗ್ರಾಮದ ನಿವಾಸಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರೂ ಹಾಗು ಕೂಡಿಗೆ ವಿ ಎಸ್ ಎಸ್ ಎನ್ ನಿರ್ದೇಶಕರೂ ಆಗಿದ್ದ ಲಕ್ಷ್ಮಣರಾಜೇ ಅರಸು (68) ಭಾನುವಾರ ಬೆಳಗ್ಗೆ ಅನಾರೋಗ್ಯದಿಂದಾಗಿ ನಿಧನ ಗೊಂಡಿದ್ದಾರೆ.
ಮೃತರು ಪತ್ನಿ ಸೇರಿದಂತೆ ಮೂವರು ಪುತ್ರಿಯರು ಹಾಗು ಓರ್ವ ಪುತ್ರನನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಕೂಡ್ಲೂರು ಗ್ರಾಮದ ಕಾವೇರಿ ನದಿ ದಂಡೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ..
Back to top button
error: Content is protected !!