ಕುಶಾಲನಗರ, ಏ 23: ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿರುವ ಉಗ್ರರ ಕೃತ್ಯವನ್ನು ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ ತೀವ್ರವಾಗಿ ಖಂಡಿಸಿದ್ದಾರೆ. ಈ ಕೃತ್ಯಕ್ಕೆ ಉಗ್ರರು ಹಾಗು ಅವರ ಪಾಕ್ ಆಶ್ರಯದಾತರು ತಕ್ಕ ಬೆಲೆ ತೆರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಸಂವಿಧಾನದ 370ನೇ ವಿಧಿ ರದ್ದತಿ, ಶಾಂತಿಯುತ ವಿಧಾನ ಸಭಾ ಚುನಾವಣೆ, ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯ ಮಹಾಪೂರ, ಹೊಸ ಮೂಲಭೂತ ಸೌಕರ್ಯಗಳು ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟು ಮಾಡಿತ್ತು. ಕಣಿವೆ ರಾಜ್ಯದಲ್ಲಿ ಮತ್ತೆ ಶಾಂತಿಯ ಆಶಾಕಿರಣ ಮೂಡಿತ್ತು. ಇದರಿಂದ ಹತಾಶಗೊಂಡ ಉಗ್ರರು ಹಾಗು ಅವರ ಪಾಕ್ ಆಶ್ರಯದಾತರು, ಈ ರಣಹೇಡಿ ಕೃತ್ಯದ ಮೂಲಕ ಸಮಸ್ತ ಭಾರತೀಯರನ್ನು ಕೆಣಕಿದ್ದಾರೆ. ಇದು ಅವರ ಅಂತ್ಯದ ಆರಂಭ ಎಂದು ಗೌತಮ್ ಗೌಡ ತಿಳಿಸಿದ್ದಾರೆ.
Back to top button
error: Content is protected !!