ಆರೋಪ

ವೈದ್ಯರಿಗೆ ಬೆದರಿಕೆ: ಹಣ ವಸೂಲಿಗೆ ಪ್ರಯತ್ನ: ನಾಲ್ವರ ವಿರುದ್ದ ದೂರು

ಕುಶಾಲನಗರ, ನ 20: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯ ಡಾ.ಎಂ.ಯು.ಚೇತನ್ ಅವರನ್ನು‌ ಬೆದರಿಸಿ ರೂ 10 ಲಕ್ಷಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡಿದ ಮೂವರ ವಿರುದ್ದ ಸರಕಾರಿ ವೈದ್ಯರ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಪ್ರಖ್ಯಾತ್, ಚಿಕ್ಕ ಅಳುವಾರ ಗ್ರಾಮದ ರೇಣುಕಾ ಹಾಗೂ ಸೋಮಶೇಖರ್ ಎಂಬವರ ವಿರುದ್ದ ದೂರು ದಾಖಲಿಸಲಾಗಿದೆ.

ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯಧಿಕಾರಿ ಡಾಕ್ಟರ್ ಚೇತನ್ ರವರ ಮೇಲೆ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ಸುಳ್ಳು ದೂರು ನೀಡಿರುವ ಬಗೆ ಖಂಡಿಸಿ ಇಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಅಧಿಕಾರಿಗಳು ಎಸ್ಪಿ ಗೆ ದೂರು ಸಲ್ಲಿಸಿದರು.

ಘಟನೆಯ ವಿವರ:. ಕಳೆದ 2020ರಲ್ಲಿ ಹೆಬ್ಬಾಲೆ ಗ್ರಾಮದಲ್ಲಿ ನಡೆದ‌ ಕ್ಯಾಂಪ್ ನಲ್ಲಿ ಚಿಕ್ಕ ಅಳುವಾರದ ಸೋಮಶೇಖರ್ ಅವರ ಪತ್ನಿ ರೇಣುಕಾ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ನಂತರ 2025 ರಲ್ಲಿ ಅವರು ನೈಸರ್ಗಿಕ ಬದಲಾವಣೆಯಲ್ಲಿ ಮತ್ತೆ ಗರ್ಭವತಿ ಆಗಿದ್ದಾರೆ . ಈ ಸಂಬಂಧ ಸರ್ಕಾರದಿಂದ ಇಂತಹ ಪ್ರಕರಣಗಳಲ್ಲಿ ರೂ 60000 ಪರಿಹಾರ ನೀಡುವ ನಿಯಮ ಇದ್ದು ವೈದ್ಯಧಿಕಾರಿಗಳು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ಆದರೆ ಗರ್ಭವತಿಯಾದ ಕುಟುಂಬದವರು ವೈದ್ಯಧಿಕಾರಿಗಳನ್ನು 10 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದರು. ಸರ್ಕಾರಕ್ಕೆ ತಾನು ಪತ್ರ ಬರೆದಿದ್ದು ಹಣ ಬಂದ ನಂತರ ಕೂಡಲೇ ಪರಿಹಾರ ಮೊತ್ತವನ್ನು ವಿತರಿಸುವುದಾಗಿ ಅವರು ಹೇಳಿದರು ಕೂಡ ತಾವೇ ಸ್ವತಹ ಹಣ ನೀಡುವಂತೆ ಅವರು ಒತ್ತಾಯಿಸ್ತಿದ್ದರು. ಇದನ್ನು ನಿರಾಕರಿಸಿದ ವೇಳೆ ಇದೀಗ ವೈದ್ಯರಾದ ಚೇತನ್ ರವರ ಮೇಲೆ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ದೂರು ನೀಡಿದ್ದಾರೆ ಎಂದು ಆರೋಪಿಸಿ, ಸುಳ್ಳು ದೂರು ನೀಡುವ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುವುದರಿಂದ ವೈದ್ಯ ವೃತ್ತಿಯನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!