ಪ್ರಕಟಣೆ

ವಿನಯ್ ಸೋಮಯ್ಯ ಆತ್ಮಹತ್ಯೆ: ಕೊಡಗು ಎಸ್ಪಿ ಅಮಾನತಿಗೆ ಆಗ್ರಹ

ಕುಶಾಲನಗರ, ಏ 04: ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ದುರಂತ ಅಂತ್ಯ ಕಂಡ ಕೊಡಗಿನ ವಿನಯ್ ಸೋಮಯ್ಯನವರ ಸಾವು ಪ್ರಜ್ಞಾವಂತರ ಪಾಲಿಗೆ ಆಘಾತಕಾರಿ, ರಾಜಕೀಯ ಮತ್ತು ಅಧಿಕಾರ ಶಾಹಿಗಳ ಒತ್ತಡ, ಸಮಾಜಘಾತುಕರ ಕಿರುಕುಳ ದಿಂದಾಗಿ ತಾನು ಮಾಡದ ತಪ್ಪಿಗೆ ತಮ್ಮ 39ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಇವರ ಸಾವು ಅವರ ಕುಟುಂಬಕ್ಕೂ ಹಾಗೂ ಸಮಾಜಕ್ಕೂ ತುಂಬಲಾರದ ನಷ್ಟ,ಇವರ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ, ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಅವರು ಮಾಡದ ತಪ್ಪಿಗೆ ನಿರಂತರವಾಗಿ ಒತ್ತಡ ಹೇರಿ, ಅವರನ್ನು ಮಾನಸಿಕವಾಗಿ ಜರ್ಜರಿತ ಮಾಡಿದ್ದಾರೆ, ಕೇವಲ ಒಂದು ವಾರದ ಹಿಂದೆ ಸಹ ಅವರ ಮೇಲೆ ರೌಡಿಶೀಟರ್ ತರೆಯುದಾಗಿ ಪೊಲೀಸ್ ಇಲಾಖೆಯಿಂದ ಬೆದರಿಸಿದ್ದಾರೆ, ಅವರ ಸಾವಿಗೆ ಅವರು ಬರೆದ ಮರಣ ಪತ್ರದಲ್ಲಿರುವ ವ್ಯಕ್ತಿಗಳು ಹಾಗೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇರವಾಗಿ ಹೊಣೆಯಾಗಿದೆ,ಒತ್ತಡಕ್ಕೆ ಮಣಿದು ಕರ್ತವ್ಯ ಲೋಪ ಎಸಗಿದ ಕೊಡಗಿನ ಎಸ್ ಪಿ ರಾಮರಾಜನ್ ರವರನ್ನು ತಕ್ಷಣವೇ ಅಮಾನತುಗೊಳಿಸಿ ಅವರ ಮೇಲೆ ಮತ್ತು ಇವರ ಸಾವಿಗೆ ಕಾರಣರಾದ ಎಲ್ಲರ ಮೇಲೆ ಮೊಖದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಶಾಲನಗರ ಗೌಡ ಸಮಾಜ ಮತ್ತು ಗೌಡ ಯುವಕ ಸಂಘ ಕುಶಾಲನಗರದಿಂದ ಆಗ್ರಹಿಸುತ್ತಿದ್ದೇವೆ,ಈ ಕೂಡಲೇ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಕೊಡಗಿನಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು

Related Articles

Leave a Reply

Your email address will not be published. Required fields are marked *

Back to top button
error: Content is protected !!