ಕಾರ್ಯಕ್ರಮ

ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ನಿಕಾನ್ ಕ್ಯಾಮರಾ ಕಾರ್ಯಗಾರ

ಕುಶಾಲನಗರ, ಏ 17: ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ನಿಕಾನ್ ಕ್ಯಾಮರಾ ಕಾರ್ಯಗಾರ ಕುಶಾಲನಗರದಲ್ಲಿ ನಡೆಯಿತು.
ಕುಶಾಲನಗರ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಗಾರವನ್ನು ದಿವ್ಯ ಸಾನಿಧ್ಯ ವಹಿಸಿದ್ದ ಬೈಲುಕುಪ್ಪೆ ಬೋಧಿಸತ್ವ ಟ್ರಸ್ಟ್ ಸ್ಥಾಪಕ ಕರ್ಮ ರಿಂಫೊಚೆ ಅವರು ಉದ್ಘಾಟಿಸಿದರು.
ನೂರಾರು ವರ್ಷಗಳಿಗೂ ಸ್ಮರಣೆ‌ ಮಾಡುವಂತಹ ಸೇವೆಯನ್ನು ಫೋಟೋಗ್ರಾಫರ್ಸ್ ಒದಗಿಸುತ್ತಿರುವುದು ಮಹತ್ಕಾರ್ಯ ಎಂದರು.

ಕುಶಾಲನಗರ
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕತೆಗೆ ತಕ್ಕಂತೆ ತಮ್ಮ ವೃತ್ತಿಯನ್ನು ಅಪ್ಡೇಟ್ ಮಾಡಿಕೊಂಡು ಮುಂದೆ ಸಾಗಬೇಕಿದೆ ಎಂದು ಕರೆ ನೀಡಿದರು.

ಸಮಾಜ ಸೇವಕ ಪ್ರತ್ಯಕ್ಷ ಹುತ್ತಿನಗದ್ದೆ ಉದಯ್ ಮಾತನಾಡಿದರು. ಫೋಟೋಗ್ರಫಿ ಹಲವು ಮಜಲುಗಳನ್ನು ದಾಟಿ ಶುಭ ಸಮಾರಂಭಗಳಲ್ಲಿ ಇಂದು ಬಹುಮುಖ್ಯ ಪಾತ್ರ ವಹಿಸಿದೆ ಎಂದರು.

ಕುಶಾಲನಗರ ರೋಟರಿ ಅಸಿಸ್ಟೆಂಟ್ ಗವರ್ನರ್ ಎಂ.ಡಿ. ರಂಗಸ್ವಾಮಿ, ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಸಮಾಜ ಸೇವಕಿ ಅನುಪಮ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ
ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆವರ್ತಿ ಆರ್ ಮಹದೇವಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಆರ್ಥಿಕ‌ ಸಹಕಾರಕ್ಕೆ‌ ಮನವಿ ಸಲ್ಲಿಸಿದರು

ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ಮತ್ತು ಅನುಪಮಾ ಆರ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ರೋಷನ್, ಕಾರ್ಯದರ್ಶಿ ಲವಕುಮಾರ್,‌ ಖಜಾಂಚಿ ಪ್ರಕಾಶ್ ಕುಂಜಲಾನ, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮಾವಾಡ್ಕರ್, ಕುಶಾಲನಗರ ತಾಲೂಕು ಅಧ್ಯಕ್ಷ ವಿಜಯಕುಮಾರ್, ದಕ್ಷಿಣ ಕೊಡಗು ಅಧ್ಯಕ್ಷ ಡಿ.ಸಿ.ರವೀಂದ್ರ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸೋಲಮನ್ ಡೇವಿಡ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!