ಕುಶಾಲನಗರ, ಏ 14: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಟಿಂಬರ್ ವ್ಯಾಪಾರಿ ಮೇಲೆ ಅಪರಿಚಿತರು ಮಾರಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಿದರಹಳ್ಳಿ ಹುಂಡಿ ಗ್ರಾಮದವರಾದ ಪ್ರಸ್ತುತ ಪಿರಿಯಾಪಟ್ಟಣದಲ್ಲಿ ತನ್ನ ತಾಯಿಯೊಂದಿಗೆ ವಾಸವಿರುವ ಪ್ರವೀಣ್ ಕುಮಾರ್ (33 ವರ್ಷ) ಹಲ್ಲೆಗೊಳಗಾದವರು. ಪಿರಿಯಾಪಟ್ಟಣ ಟೌನ್ ಬೆಟ್ಟದಪುರ ರಸ್ತೆಯಲ್ಲಿ ಟಿಂಬರ್ ಅಂಗಡಿ ಇಟ್ಟಿಕೊಂಡು ವ್ಯಾಪಾರ ನಡೆಸಿಕೊಂಡು ಬರುತ್ತಿದ್ದು ಜೊತೆಗೆ ತನ್ನ ತಾಯಿಯ ಮನೆ ಕಡೆಯಿಂದ ಬರಬೇಕಾದ ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮ ಭಾಗದ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದರ ನಡುವೆ ಡಿವೈಎಸ್ಪಿ ಗೋಪಾಲ ಕೃಷ್ಣ ನೇತೃತ್ವದಲ್ಲಿ ಸಂಧಾನ ಮಾತುಕತೆ ನಡೆದು ಎರಡು ಎಕರೆ ಜಮೀನು ನೀಡುವಂತೆ ತೀರ್ಮಾನವಾಗಿ ನಂತರ ಒಂದಿಂಚು ಭೂಮಿ ನೀಡುವುದಿಲ್ಲ ಎಂದು ಮತ್ತೆ ಕ್ಯಾತೆ ತೆಗೆದು ತನ್ನ ಸೋದರ ಮಾವ ಸುಪಾರಿ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಪ್ರವೀಣ್ ದೂರಿದ್ದಾರೆ.
Back to top button
error: Content is protected !!