ಕುಶಾಲನಗರ, ಏ 15: ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ಈ ತಿಂಗಳ 17 ರಂದು ನಿಕಾನ್ ಕ್ಯಾಮರಾ ಕಾರ್ಯಗಾರ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಆವರ್ತಿ ಆರ್ ಮಹದೇವಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕುಶಾಲನಗರ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 9:30 ರಿಂದ ಕಾರ್ಯಗಾರ ನಡೆಯಲಿದ್ದು ಬೈಲುಕುಪ್ಪೆ, ಬೋಧಿಸತ್ವ ಟ್ರಸ್ಟ್ ಸ್ಥಾಪಕರಾದ ಕರ್ಮ ರಿಂಫೊಚೆ ಅವರ ದಿವ್ಯ ಸಾನಿಧ್ಯದಲ್ಲಿ ಸಮಾಜ ಸೇವಕರಾದ ಪ್ರತ್ಯಕ್ಷ ಹುತ್ತಿನಗದ್ದೆ ಉದಯ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಆವರ್ತಿ ಆರ್ ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಎಂ ಡಿ ರಂಗಸ್ವಾಮಿ, ದೀಪಾ ಪೂಜಾರಿ ಮತ್ತಿತರರು ಪಾಲ್ಗೊಳ್ಳುವರು.
ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ಮತ್ತು ಅನುಪಮಾ ಆರ್ಯ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿರುವ ಮಹಾದೇವಪ್ಪ ಕಾರ್ಯಗಾರದಲ್ಲಿ ಮೊದಲು ನೋಂದಾಯಿಸಿದ 50 ಛಾಯಾಗ್ರಾಹಕರಿಗೆ ನಿಕಾನ್ ಕ್ಯಾಮೆರಾ ಸರ್ವಿಸ್ ಉಚಿತ ವಾಗಿರುತ್ತದೆ. ಸದಸ್ಯರು ಕಾರ್ಯಗಾರ ಹಾಗೂ ಸದಸ್ಯರಿಗೆ ನೀಡಲಾಗುವ ಯೋಜನೆಯ ಅನುಕೂಲತೆಯನ್ನು ಪಡೆಯುವಂತೆ ಅವರು ಕೋರಿದ್ದಾರೆ.
Back to top button
error: Content is protected !!