ಪ್ರಕಟಣೆ

ಏ 19 ರಂದು ಕುಶಾಲನಗರ ಬೈಚನಹಳ್ಳಿಯಲ್ಲಿ ಭರತನಾಟ್ಯ ತರಗತಿ ಆರಂಭ

ಕುಶಾಲನಗರ, ಏ 13:ನಾಟ್ಯ ನಿಕೇತನ ಸಂಗೀತ ನೃತ್ಯ ಶಾಲೆಯ ಭರತನಾಟ್ಯ ನೂತನ ತರಗತಿಯ ಶುಭಾರಂಭ ಹಾಗೂ ಸರಸ್ವತಿ ಪೂಜೆ, ಗೆಜ್ಜೆ ಪೂಜಾ ಕಾರ್ಯಕ್ರಮವನ್ನು ಏಪ್ರಿಲ್ 19 ರಂದು ಬೈಚನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಿಂದ ಜರುಗುತ್ತದೆ.
ಈ ಸಂಸ್ಥೆಯ ನೃತ್ಯ ಗುರುಗಳಾದ  ಪೂರ್ಣಿಮಾವಿನಯ್ ರವರು
ಭರತನಾಟ್ಯದಲ್ಲಿ ವಿದ್ವತ್ ಹಾಗೂ ಕರ್ನಾಟಕ ಡಾ. ಗಂಗೂಭಾಯಿ ಹಾನಗಲ್ ಸಂಗೀತಾ, ಕಲೆ ಪ್ರದರ್ಶಕ ವಿಶ್ವವಿದ್ಯಾಲಯದಲ್ಲಿ MA. ಭರತನಾಟ್ಯ ಪದವಿಯನ್ನು ಪಡೆದುಕೊಂಡಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ನೀಡಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಹಾಗೆಯೇ ಇವರ ಸಮ್ಮುಖದಲ್ಲಿ ಹಲವಾರು ವಿದ್ಯಾರ್ಥಿಗಳು ಭರತನಾಟ್ಯ ಪರೀಕ್ಷೆಯಾದ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳನ್ನು ಬರೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!