ಪ್ರಕಟಣೆ

ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯಲ್ಲಿ ಕ್ರಿಯೇಟಿವ್ ಕಿಡ್ಸ್ ಮಕ್ಕಳ ಬೇಸಿಗೆ ಶಿಬಿರ ಆರಂಭ

ಕುಶಾಲನಗರ, ಏ 09:ದಿನಾಂಕ: 08-04-2026 ರ ಬುಧವಾರದಿಂದ ಮಕ್ಕಳಿಗೆ ಬೇಸಿಗೆ ರಜೆಯ ಪ್ರಯುಕ್ತ 4 ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರವನ್ನು ಕೂಡಿಗೆಯ ಹೆಸರಾಂತ ನೃತ್ಯ ಶಾಲೆಯಾದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದು, ವಿಧ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಮೊಬೈಲ್ ಫೋನ್ ಇತ್ಯಾದಿಗಳನ್ನು ಬಳಸಿಕೊಂಡು ರಜೆಯನ್ನು ವ್ಯರ್ಥ ಮಾಡದೇ ಬೇಸಿಗೆ ಶಿಬಿರದಂತಹ ಉತ್ತಮ ಆಯ್ಕೆಯನ್ನು ಉಪಯೋಗಿಸಿಕೊಂಡು ಹೆಚ್ಚಿನ ಚಟುವಟಿಕೆ ಮತ್ತು ಆಟೋಟಗಳಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಉತ್ತಮ ವೇದಿಕೆ ಈ ಬೇಸಿಗೆ ಶಿಬಿರವಾಗಿದೆ ಮತ್ತು ಈ ಶಿಬಿರದಲ್ಲಿ ನೃತ್ಯ, ಸಂಗೀತ, ಚಿತ್ರಕಲೆ, ಈಜು ತರಬೇತಿ, ಗಿಟಾರ್ – ಪಿಯಾನೋ ತರಬೇತಿ, ಒಳಾಂಗಣ ಆಟಗಳು, ಹೊರಾಂಗಣ ಆಟಗಳು, ಕ್ಲೇ ಮಾಡಲೆಂಗ್, ಸ್ಕೇಟಿಂಗ್ ತರಬೇತಿ, ಕರಾಟೆ ಮತ್ತು ಇತ್ಯಾದಿ ಚಟುವಟಿಕೆಗಳ ತರಬೇತಿಗಳನ್ನು ಒಳಗೊಂಡಿರುತ್ತದೆ. ನೃತ್ಯ ಸಂಯೋಜಕ ಮತ್ತು ತರಬೇತುದಾರದ ಅಕ್ತರ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬೇಸಿಗೆ ಶಿಬಿರ 50 ದಿನಗಳ ಶಿಬಿರವಾಗಿದ್ದು ದಾಖಲಾತಿ ಪ್ರಾರಂಭವಾಗಿದೆ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ಮತ್ತು ಬಹುಮಾನಗಳನ್ನು ಶಿಬಿರಾರ್ಥಿಗಳಿಗೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಗೆ ಮತ್ತು ಕುಶಾಲನಗರ ತಾಲೂಕಿನ ವಿಧ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳ ಬೇಕಾಗಿ ಶಿಬಿರದ ಮುಖ್ಯಸ್ಥರು ಮತ್ತು ಪೋಷಕ ವೃಂದದವರು ತಿಳಿಸಿರುತ್ತಾರೆ. ಬೇಸಿಗೆ ಶಿಬಿರದ ಮತ್ತು ನೃತ್ಯ ತರಗತಿಗಳ ದಾಖಲಾತಿಗಾಗಿ 9606302963 ಅಥವಾ 6362257084 ನಂಬರ್ ಗೆ ಸಂಪರ್ಕಿಸಲು ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!