ಕುಶಾಲನಗರ, ಏ 14: ಕುಶಾಲನಗರದ ಬೆನಕಾ ಗ್ಯಾಸ್ ಏಜೆನ್ಸಿ ವತಿಯಿಂದ ಭಾರತ್ ಗ್ಯಾಸ್ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಗ್ಯಾಸ್ ವಿತರಕರು, ಸಿಬ್ಬಂದಿ ವರ್ಗದವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮಿಸಿದರು. ನೆರೆದಿದ್ದವರಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಏಜೆನ್ಸಿ ಪ್ರಮುಖರಾದ ಹೆಚ್.ಇ. ದರ್ಶನ್, ಸಂವಿಧಾನ ಶಿಲ್ಪಿಯ ಕೊಡುಗೆ ಕಾರಣದಿಂದ ನಾವು ಇಂದು ಉದ್ಯಮಿಗಳಾಗಲು ಸಾಧ್ಯವಾಗಿದೆ. ಅಂಬೇಡ್ಕರ್ ಅವರ ಮೂಲಕ ಹಿಂದುಳಿದವರು ಇಂದು ಸಮಾಜದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು. ಅಡಿಗೆ ಅನಿಲ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ತಿಳಿಸಿದ ಅವರು,
ಏಜೆನ್ಸಿ ಮೂಲಕ ಸಕಾಲದಲ್ಲಿ ಸಮರ್ಪಕವಾಗಿ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಏಜೆನ್ಸಿ ಮಾಲೀಕರಾದ ರಾಧಾ, ಪ್ರಮುಖರಾದ ಅಕ್ಷಯ್, ಪೂರ್ಣಿಮಾ ಇದ್ದರು.
Back to top button
error: Content is protected !!