ಕುಶಾಲನಗರ, ಜ 18:ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರದೂರು ಗ್ರಾಮದ ಮುತ್ತಿನತೋಟ ಎಸ್ಟೇಟ್ನ ಲೈನ್ ಮನೆಯಲ್ಲಿ ವಾಸವಿದ್ದ ರಮೇಶ ಎಂ.ವಿ. ಎಂಬಾತನು ದಿನಾಂಕ: 05-08-2021 ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಅಪ್ರಾಪ್ತ ಬಾಲಕಿಯ ಪೋಷಕರು ರಮೇಶ ಎಂ.ವಿ. ಎಂಬಾತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 376(ಎಬಿ) ಐಪಿಸಿ ಮತ್ತು 6 ಪೋಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ಆರೋಪಿ ರಮೇಶ ಎಂ.ವಿ. ಎಂಬಾತನನ್ನು ದಿನಾಂಕ: 07-08-2021 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸದರಿ ಪ್ರಕರಣದ ತನಿಖಾಧಿಕಾರಿಯಾದ ಮಹೇಶ್ ಎಂ., ಸಿಪಿಐ ಕುಶಾಲನಗರ ವೃತ್ತ ಮತ್ತು ತನಿಖಾ ಸಹಾಯಕರಾದ ಲೋಕೇಶ್ ರವರು ಸಂಪೂರ್ಣ ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ದಿನಾಂಕ:16.09.2021 ರಂದು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ದಿನಾಂಕ:17-01-2025 ರಂದು ಸದರಿ ಪ್ರಕರಣದ ಆರೋಪಿಯಾದ ರಮೇಶ ಎಂ.ವಿ. ಈತನಿಗೆ ಒಟ್ಟು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 5,000/- ಗಳ ದಂಡ ಹಾಗೂ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 03 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ಘನ ನಾಯಾಲಯದ ಗೌರವನ್ವಿತ ನ್ಯಾಯಾಧೀಶರಾದ ಬಸವರಾಜು ಸಿ.ಕೆ. ರವರು ತೀರ್ಪು ನೀಡಿರುತ್ತಾರೆ.
Back to top button
error: Content is protected !!