ಕುಶಾಲನಗರ, ಜ 16: ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರ ಸ್ಥಾನ ಬೆಂಗಳೂರು ರವರ ಆದೇಶದ ಪ್ರಕಾರ, ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ ಯವರ ಆದೇಶದಂತೆ,
ಅಬಕಾರಿ ಉಪ ಅಧೀಕ್ಷಕರು, ಸೋಮವಾರಪೇಟೆ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಗುರುವಾರ ಬೆಳಿಗ್ಗೆ 6 ಗಂಟೆಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ದೊಡ್ಡತೋಳೂರು ಗ್ರಾಮದ ಆನಂದ ಡಿ.ಎನ್, ವಿರೂಪಾಕ್ಷ ಮತ್ತು ಮಾದಪ್ಪ ಕೆ.ಜಿ ಎಂಬವರು ಅಕ್ರಮವಾಗಿ ಕಳ್ಳಭಟ್ಟಿ ತಯ್ಯಾರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಸೋಮವಾರಪೇಟೆ ವಲಯ ಕಚೇರಿಯ ಅಧಿಕಾರಿ ಸಿಬ್ಬಂದಿಗಳು ತಂಡವನ್ನು ರಚಿಸಿ ದಾಳಿ ಮಾಡಿ, ಆನಂದನ ಮನೆಯಲ್ಲಿ 9 ಲೀಟರ್ ಪುಳಗoಜಿ ,200 ಮಿಲಿ ಕಳ್ಳಭಟ್ಟಿ ಸಾರಾಯಿ ಹಾಗೂ ಪರಿಕರ ವಶಪಡಿಸಿಕೊಳ್ಳಲಾಯಿತು. ವಿರೂಪಾಕ್ಷ ಎಂಬಾತನ ಮನೆಯಲ್ಲಿ ಶೋಧನೆ ನಡೆಸಿ 3.5 ಲೀ ಕಳ್ಳಭಟ್ಟಿ ಸಾರಾಯಿ, 20 ಲೀ ಬೆಲ್ಲದ ಪುಳಗಂಜಿ ಮತ್ತು ಡಿಸ್ಟಿಲರಿ ಸೆಟ್ ಪತ್ತೆಯಾಗಿರುತ್ತದೆ ಹಾಗೂ ಮಾದಪ್ಪ ನ ಮನೆಯಲ್ಲಿ 30 ಲೀ ಪುಳಗಂಜಿ, ಮತ್ತು ಇತರೆ ಪರಿಕರಗಳು ದೊರೆತಿದ್ದು ಎಲ್ಲರಿಂದ ಅಕ್ರಮ ವಸ್ತುಗಳನ್ನು ಇಲಾಖೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
Back to top button
error: Content is protected !!