ಸೋಮವಾರಪೇಟೆ, ಡಿ 21:ಜೀವನದ ಜಂಜಾಟದಲ್ಲಿರುವ ಜನತೆಗೆ ಆಧ್ಯಾತ್ಮದ ಅವಶ್ಯವಿದೆ ಅದರಿಂದ ನೆಮ್ಮದಿ ಕಾಣಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಅಕ್ಕನ ಬಳಗ ವತಿಯಿಂದ ಪಟ್ಟಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಇಷ್ಟ ಲಿಂಗ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಹಾಗೂ ಬಿಡುವಿಲ್ಲದ ಕೆಲಸದಿಂದ ಜನರಿಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಪರಿಹಾರವೆಂದರೆ ಪೂಜೆ ಹಾಗು ಧ್ಯಾನ ಆದ್ದರಿಂದ ಭಗವಂತನ ಮೊರೆಹೋಗಿ ನೆಮ್ಮದಿಯನ್ನು ಕಾಣಿರಿ ಎಂದರು.
ದೇಹದ ಮೇಲೆ ಇಷ್ಟಲಿಂಗ ಧರಿಸಿ ಪೂಜಿಸುವ ದರ್ಮವೊಂದು ಇದ್ದರೆ ಅದು ವೀರಶೈವ ಲಿಂಗಾಯತ ಧರ್ಮವೆಂದು ಹೆಮ್ಮೆ ವ್ಯಕ್ತಡಿಸಿದರು. ಇಲ್ಲಿ ಯಾವುದೇ ಸೂತಕಕ್ಕೂ ಆಸ್ಪದವಿಲ್ಲ ಲಿಂಗಪೂಜೆ ಮುಖ್ಯವೆಂದರು.
ಇಷ್ಟಲಿಂಗ ಪೂಜೆಗೆ ಪ್ರಾತಃಕಾಲ ಸೂಕ್ತವಾದದ್ದು.ಮನೆಯಲ್ಲಿ ತಮ್ಮ ಮಕ್ಕಳಿಗೆ ಪೂಜೆಯನ್ನು ಕಲಿಸಿ,ವಚನ ಹೇಳಿಸಿ ಆ ಮೂಲಕ ಶಿವ ಶರಣರ ಆಶಯವನ್ನು ಈಡೇರಿಸಿ ಎಂದು ತಿಳಿಸಿದರು.
2,3 ತಿಂಗಳಿಗೊಮ್ಮೆ ಇಂತಹ ಸಾಮೂಹಿಕ ಇಷ್ಟಲಿಂಗ ಪೂಜೆ, ವಚನಕಮ್ಮಟಗಳನ್ನು ಏರ್ಪಡಿಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.
ಈ ಸಂದರ್ಭ ಇಷ್ಟಲಿಂಗ ಪೂಜೆ,ಅಷ್ಟೋತ್ತರ,ಅಕ್ಕ ಮಹಾದೇವಿಯವರಿಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.
ಕಾರ್ಯಕ್ರಮದಲ್ಲಿ ಪಿ.ಎನ್.ಹೆರಿಟೇಜ್ ಮಾಲೀಕರಾದ ಜಿ.ಎಸ್.ಪ್ರಭುದೇವ್ ರವರು ನೀಡಿದ ಗ್ಯಾಸ್ ಸ್ಟವ್ ಗಳನ್ನು ಸ್ವಾಮೀಜಿ ಅಕ್ಕನ ಬಳಗಕೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ,ಕಾರ್ಯದರ್ಶಿ ಮಾಯಾ ಗಿರೀಶ್,ಖಜಾಂಚಿ ಆಶಾ ಹೂವಯ್ಯ, ನಿರ್ದೇಶಕರುಗಳಾದ ಜಗದಾಂಬ,ರಜಿನಿ,ಮಂಜುಳಾ,
ದಿವ್ಯ,ಅನುಪಮ ಶಿವು,ಸವಿತಾನೀಲಕಂಠ,ಹಾಗೂ ಮುಂತಾದವರು ಉಪಸ್ಥಿತರಿದ್ದರು.
Back to top button
error: Content is protected !!