ಕುಶಾಲನಗರ, ಡಿ 12: ಕುಶಾಲನಗರ ರೋಟರಿ ಸಂಸ್ಥೆಯ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ (ಹಾರಂಗಿ) ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಂಥಾಲಯಕ್ಕೆ ಅನುಕೂಲವಾಗುವಂತಹ ವಿವಿಧ ಪುಸ್ತಕಗಳು ಹಾಗೂ ಪೀಠೋಪಕರಣಗಳನ್ನು ಕೊಡುಗೆ ನೀಡಲಾಯಿತು.
ರೋಟರಿ ಸಂಸ್ಥೆಯ ವತಿಯಿಂದ ಪೀಠೋಪಕರಣಗಳನ್ನು ಜಿಲ್ಲಾ ಗೌರ್ನರ್ ವಿಕ್ರಮ್ ದತ್ತಾ ಶಾಲಾ ಮುಖ್ಯ ಶಿಕ್ಷಕಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭ ರೋಟರಿ ಜಿಲ್ಲಾ ಕಾರ್ಯದರ್ಶಿ ರೀತೀಶ್ ಬಾಳಿಗಾ, ಸಹಾಯಕ ಗೌರ್ನರ್ ಡಾ. ಹರೀಶ್ ಎ. ಶೆಟ್ಟಿ, ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಸಿ. ಬಿ. ಹರೀಶ್, ಕಾರ್ಯದರ್ಶಿ ಡಿ.ಡಿ. ಕಿರಣ್, ಕೂಡಿಗೆ ಕ್ಲಸ್ಟರ್ ವಿಭಾಗದ ಸಿ.ಆರ್. ಪಿ. ಶಾಂತಕುಮಾರ್ ಸೇರಿದಂತೆ ಕುಶಾಲನಗರ ರೋಟರಿ ಕ್ಲಬ್ ನ ಸದಸ್ಯರು, ಶಾಲಾ ಶಿಕ್ಷಕರ ವೃಂದದವರು ಹಾಜರಿದ್ದರು.
Back to top button
error: Content is protected !!