ಕುಶಾಲನಗರ, ಡಿ 17: ಕುಮಾರಿ ಲಿಪಿಕ ಆಲಿಯಾಸ್ ಐಶ್ವರ್ಯ, ಇವರ ತಂದೆ ಹೆಚ್.ಕೆ.ರಮೇಶ್ ಮತ್ತು ತಾಯಿ ಎನ್.ರೂಪ ಇವರು ಹೆಚ್.ಪಿ.ಗ್ಯಾಸಿನ ಅಡುಗೆ ಅನಿಲ ಸಂಪರ್ಕವನ್ನು ಪಡೆದುಕೊಂಡಿದ್ದು,ದಿನಾಂಕ 04/10/2023 ರಂದು ರಾತ್ರಿ 8:30 ರ ಸಮಯದಲ್ಲಿ ಅವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ, ಮನೆಯಲ್ಲಿದ್ದ ಗ್ಯಾಸ್ (ಇಂಧನ) ಸೋರಿಕೆಯಿಂದ ಉಂಟಾದ ಅಗ್ನಿ ಅನಾಹುತದಲ್ಲಿ ಕುಮಾರಿ ಲಿಪಿಕಾಳ ತಂದೆ ತಾಯಿಗಳು ತೀವ್ರವಾಗಿ ಗಾಯಗೊಂಡು ದಿನಾಂಕ 08/10/2023 ರಂದು ಆಕೆಯ ತಂದೆ ಹೆಚ್.ಕೆ.ರಮೇಶ್ ಹಾಗೂ ದಿನಾಂಕ 09/10/2023 ರಂದು ಆಕೆಯ ತಾಯಿ ಎನ್.ರೂಪ ಇವರು ಆಸ್ಪತ್ರೆಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಕುಮಾರಿ ಲಿಪಿಕ ಆಲಿಯಾಸ್ ಐಶ್ವರ್ಯ ರವರು ಮೃತ ದಂಪತಿಗಳ ಕುಟುಂಬದ ಏಕೈಕ ಉತ್ತರಾಧಿಕಾರಿಯಾಗಿರುತ್ತಾರೆ. ಸದರಿ ಅಗ್ನಿ ದುರಂತದಿಂದ ಆದ ನಷ್ಟಗಳಿಗೆ ಸಂಬಂಧಪಟ್ಟ ಸಂಸ್ಥೆಯಿಂದ ಯಾವುದೇ ರೀತಿಯ ಪರಿಹಾರ ದೊರಕದೇ ಇದ್ದುದ್ದರಿಂದ ಸೂಕ್ತ ಪರಿಹಾರವನ್ನು ಎದುರುದಾರರುಗಳಿಂದ ಕೊಡಿಸಿಕೊಡಬೇಕೆಂದು ಅವರುಗಳ ವಿರುದ್ಧ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಎರಡು ದೂರನ್ನು ಸಲ್ಲಿಸಿರುತ್ತಾರೆ. ಇವರ ಎರಡು ಪ್ರಕರಣಗಳನ್ನು ಆಯೋಗವು ದಾಖಲು ಮಾಡಿಕೊಂಡು ಉಭಯ ಪಕ್ಷಕಾರರುಗಳ ವಾದ ವಿವಾದಗಳನ್ನು ಚರ್ಚಿಸಿದ ಕೊಡಗು ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷೆ ಸಿ.ರೇಣುಕಾಂಬ ಮತ್ತು ಸದಸ್ಯರಾದ ಗೌರಮ್ಮಣ್ಣಿ ರವರುಗಳು ಸದರಿ ದೂರನ್ನು ಭಾಗಶ: ಪುರಸ್ಕರಿಸಿ, ಹೆಚ್.ಪಿ.ಗ್ಯಾಸ್, ಮಂಗಳೂರು ಹಾಗೂ ಎಸ್.ಬಿ.ಐ. ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಮುಂಬೈ ರವರುಗಳು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾಲಿಸಿಯ ಮೊತ್ತ ಹಾಗೂ ಅವರು ಅನುಭವಿಸಿರುವ ಮಾನಸಿಕ ವೇದನೆಗೆ ಮತ್ತು ಖರ್ಚುವೆಚ್ಚಗಳಿಗೆ ಒಟ್ಟು 28,00,000/- ರೂ.ಗಳನ್ನು ಪರಿಹಾರವಾಗಿ ಪಾವತಿಸಬೇಕೆಂದು ಆದೇಶ ನೀಡಿರುತ್ತಾರೆ.
Back to top button
error: Content is protected !!