ಕುಶಾಲನಗರ, ಡಿ.15: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ದಿನಾಂಕ 17 ರಂದು ಮಂಗಳವಾರ 11 ಗಂಟೆಗೆ ಕುಶಾಲನಗರ ಎಸ್. ಬಿ. ಐ.( S. B. I. ) ಬ್ಯಾಂಕ್ ನ ಮೇನೆಜರ್ಮ ತ್ತು ಅಧಿಕಾರಿ ವರ್ಗದವರು ಕೃಷಿ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ. ಸಂಘದ ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಲು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮನವಿ ಮಾಡಿದ್ದಾರೆ.
ರೈತರು ಸಣ್ಣ ಪ್ರಮಾಣದ ಡೈರಿ ಆರಂಭ ಮಾಡುವ ಬಗ್ಗೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಸೇರಿದಂತೆ ವಿವಿಧ ಬಗೆಯ ರೈತರಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿ ವರ್ಗದವರು ಒದಗಿಸಲಿದ್ದಾರೆ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
Back to top button
error: Content is protected !!