ಸನ್ಮಾನ

ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ

ಕುಶಾಲನಗರ, ಡಿ 16: ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆಯು ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಇದೆ ಸಂದರ್ಭದಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ ನಲ್ಲಿ ವಿಶ್ವ ಚಾಂಪಿಯನ್ ಆದ ಆಜ್ಞ ಅಮಿತ್ ಹಾಗೂ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ವಿಜೇತ ಕೋಟೆರ ಡಿವಿನ್ ಗಣಪತಿ ಮತ್ತು ರಾಷ್ಟ್ರೀಯ ಹಾಕಿ ಆಟಗಾರ ಹಾನಗಲ್ ತ್ರಿಶೂಲ್ ಗಣಪತಿ ಯವರನ್ನು ಸನ್ಮಾನಿಸಲಾಯಿತು, ಸಾಧಕರನ್ನು ಸಭೆಗೆ ಪರಿಚಯಿಸಿದ ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷರವರು ಮಾತನಾಡಿ, ಮಿಕ್ಸಡ್ ಮಾರ್ಷಲ್ ಆರ್ಟ್ಸ್(ಕಿಕ್ ಬಾಕ್ಸಿಂಗ್) ನಲ್ಲಿ ಆಜ್ನ ಅಮಿತ್ ರವರು ಅತ್ಯಂತ ಕಿರಿಯ ವಯಸ್ಸಿನ ವಿಶ್ವ ಚಾಂಪಿಯನ್ ಆಗಿದ್ದು ಇವರ ಈ ಸಾಧನೆಯಿಂದ MMEನಲ್ಲಿ 55ನೇ ರಾಂಕಿಂಗ್ ನಲ್ಲಿದ್ದ ಭಾರತವು ಈಗ ಮೂರನೇ ಸ್ಥಾನಕ್ಕೇರಿದೆ ಎಂದು ಪ್ರಶಂಶಿಸಿದರು ಹಾಗೂ ರಾಷ್ಟ್ರಮಟ್ಟದ ರೋಲಾರ್ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಒಂದು ಚಿನ್ನ ಮತ್ತು ಒಂದು ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡ ಕೋಟೆರ ಡಿವಿನ್ ಗಣಪತಿ ಮತ್ತು ರಾಷ್ಟ್ರೀಯ ಹಾಕಿ ಆಟಗಾರ ತ್ರಿಶೂಲ್ ಗಣಪತಿ ಅವರನ್ನು ಅಭಿನಂದಿಸಿದರು, ಈ ಮೂರು ಸ್ಪರ್ಧಿಗಳು ಗೌಡ ಸಮಾಜ ಕುಶಾಲನಗರದ ಸದಸ್ಯರ ಮಕ್ಕಳು ಎಂದು ಹೆಮ್ಮೆ ವ್ಯಕ್ತಪಡಿಸಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!