ಕುಶಾಲನಗರ, ಮಾ 13: ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಬಿ.ಎನ್.ಕಾಶಿ ಆಯ್ಕೆಯಾದರು.
ಸಂಘದ ಅಧ್ಯಕ್ಷರಾದ ಬಿ.ಸಿ.ಮುರಳಿಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಒಡಂಬಡಿಕೆ ಪ್ರಕಾರ ಹಾಲಿ ಉಪಾಧ್ಯಕ್ಷೆ ಎಸ್.ಬಿ.ಅನಿತಾ ಅವರಿಂದ ಕಾಶಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಮಾಡಿಕೊಂಡಿದ್ದ ಒಪ್ಪಂದ ಪ್ರಕಾರ ಮುಂದಿನ ಎರಡೂವರೆ ವರ್ಷ ಅವಧಿಗೆ ಕಾಶಿ ಅವರು ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿ.ಸಿ.ಮುರಳಿಮಾದಯ್ಯ ಅವರು ತಿಳಿಸಿದರು.
ಉಳಿದ ಅವಧಿಯಲ್ಲಿ ಉಪಾಧ್ಯಕ್ಷನಾಗಿ ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ನೂತನ ಉಪಾಧ್ಯಕ್ಷ ಬಿ.ಎನ್.ಕಾಶಿ ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತೀಶ್ ರೈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಆರ್.ಕೆ
ಚಂದ್ರ, ಧನಪಾಲ್, ದಾದಪ್ಪ, ಕಾರ್ಯಪ್ಪ, ಉದಯಕುಮಾರ್, ಪಂಚಾಕ್ಷರಿ ಎನ್.ಸಿ, ಕೆ.ಕೆ.ಲೀಲಾವತಿ ಸೇರಿದಂತೆ ಸಿಬ್ಬಂದಿಗಳು ಇದ್ದರು.
Back to top button
error: Content is protected !!