ರಾಜಕೀಯ

ಕುಶಾಲನಗರ ಬಿಜೆಪಿ ವತಿಯಿಂದ ರಾಷ್ಟ್ರಪತಿ ಚುನಾವಣೆ ಗೆಲುವಿನ ಸಂಭ್ರಮಾಚರಣೆ

ಕುಶಾಲನಗರ,ಜು 21:
ರಾಷ್ಟ್ರಪತಿ ಚುನಾವಣೆಯಲ್ಲಿ‌ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮುಜಿ ಗೆಲುವಿನ ಹಿನ್ನಲೆಯಲ್ಲಿ ಕುಶಾಲನಗರ ಬಿಜೆಪಿ ಘಟಕದ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.
ಕುಶಾಲನಗರದ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಸಂಭ್ರಮಾಚರಣೆ ಮಾಡಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ದ್ರೌಪದಿ ಮುರ್ಮುಜಿ ಹಾಗೂ ನರೇಂದ್ರ‌ಮೋದಿ ಪರ ಜಯಘೋಷ ಮೊಳಗಿಸಿದರು. ನೆರೆದಿದ್ದವರಿಗೆ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಬಿ.ಜೈವರ್ಧನ್, ರಾಜ್ಯಪಾಲರಾಗಿ ಅನುಭವ ಹೊಂದಿರುವ ದ್ರೌಪದಿ ಮುರ್ಮು ಅವರು ಭಾರತದ ಕೀರ್ತಿಯನ್ನು‌ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ‌ ಮಾಡಲಿದ್ದಾರೆ. ಓರ್ವ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಪಕ್ಷದ ಪ್ರಮುಖರು ಹಾಗೂ ಮತದಾರರಿಗೆ ಧನ್ಯವಾದ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿಯೂ ಆದ ಪಪಂ ಸದಸ್ಯ ಬಿ.ಅಮೃತ್ ರಾಜ್ ಮಾತನಾಡಿ, ವಿವಿಧತೆಯಲ್ಲಿ ಏಕತೆಗೆ ಪೂರಕವಾಗಿ ಬಿಜೆಪಿ ಪಕ್ಷ ಎಲ್ಲಾ ಸ್ಥರದವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ಒದಗಿಸುತ್ತಿದೆ. ಎಲ್ಲಾ ವರ್ಗದವರನ್ನು ಒಟ್ಟಿಗೆ ಕರೆದೊಯ್ಯುವ ಮೂಲಕ ಬಿಜೆಪಿ ಇತರೆ ಪಕ್ಷಗಳಿಗೆ ಮಾದರಿಯಾಗಿದೆ ಎಂದರು.
ನಗರ‌ ಬಿಜೆಪಿ ಅಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆ ಸಂದರ್ಭ ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಪಪಂ ಸದಸ್ಯರಾದ ರೂಪಾ ಉಮಾಶಂಕರ್, ಡಿ.ಕೆ.ತಿಮ್ಮಪ್ಪ, ನಾರಾಯಣ, ಪ್ರಮುಖರಾದ ಕುಮಾರಪ್ಪ, ಎಂ.ಡಿ.ಕೃಷ್ಣಪ್ಪ, ಶಿವಾಜಿ, ವೇದಾವತಿ, ನವನೀತ್, ಚಂದ್ರಶೇಖರ್, ಸುಮನ್, ಅಣ್ಣಯ್ಯ, ಬೋಸ್ ಮೊಣ್ಣಪ್ಪ, ಆದರ್ಶ್, ಮಧುಸೂದನ್, ರಾಮಕೃಷ್ಣ, ಸೋಮಶೇಖರ್, ರಾಮಚಂದ್ರ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!