ಕೊಪ್ಪ ಗ್ರಾಮದ ಗುಡ್ಡೇನಹಳ್ಳಿ ಶ್ರೀ ಚೌಡಮ್ಮ ದೇವಿಯ ವಾರ್ಷಿಕ ಪೂಜಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು. ದೇವಸ್ಥಾನ ಸಮಿತಿ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಪೂಜಾ ಕೈಂಕರ್ಯದ ಅಂಗವಾಗಿ ಗುರುವಾರ ನವಚಂಡಿಕಾ ಯಾಗ ಪೂಜಾ ವಿಧಿ ನೆರವೇರಿಸಲಾಯಿತು.
ರಾಘವೇಂದ್ರ ನೇತೃತ್ವದ ತಂಡ ಪೂಜಾ ವಿಧಿ ನೆರವೇರಿಸಿದರು.
ಕುಶಾಲನಗರದ ಬಾಬಣ್ಣ ಕುಟುಂಬದ ವತಿಯಿಂದ ಒಟ್ಟು 3.50 ಲಕ್ಷ ವೆಚ್ಚದಲ್ಲಿ ಬೆಳ್ಳಿಯ ದೇವಿಯ ವಿಗ್ರಹ ಹಾಗೂ ಚಿನ್ನದ ತಾಳಿಯನ್ನು ದೇವಾಲಯಕ್ಕೆ ಸಮರ್ಪಿಸಲಾಯಿತು. ಪೂಜಾ ವಿಧಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಮಾಜಿ ಶಾಸಕ ವೆಂಕಟೇಶ್, ಸಮಾಜ ಸೇವಕ ಕೌಲನಹಳ್ಳಿ ಸೋಮಶೇಖರ್, ಪ್ರಸನ್ನ,
ದೇವಾಲಯ ಸಮಿತಿ ಪ್ರಮುಖರಾದ ಎಚ್.ಎಂ.ಚಂದ್ರು, ಡಿ.ಕೆ.ಗಿರೀಶ್, ಸುರೇಶ್, ಸೋಮಶೇಖರ್, ಸ್ವಾಮಿ, ಮಂಜು, ರವಿ, ರಾಜೇಗೌಡ, ಭಾನುಪ್ರಕಾಶ್, ಮಹದೇವ್, ರಘು, ಅಣ್ಣಪ್ಪ, ಕೀರ್ತಿ, ವಸಂತ ಇದ್ದರು.
Back to top button
error: Content is protected !!