ಧಾರ್ಮಿಕ
ಕುಶಾಲನಗರ ಹನುಮ ಜಯಂತಿ: ಪ್ರಥಮ ಬಹುಮಾನ ಹಂಚಿಕೊಂಡ ಎರಡು ಮಂಟಪಗಳು
ಕುಶಾಲನಗರ, ಡಿ 14: ಕುಶಾಲನಗರದಲ್ಲಿ ಹನುಮ ಜಯಂತಿ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ಉತ್ಸವ ಮಂಟಪಗಳ ಶೋಭಾಯಾತ್ರೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಎರಡು ತಂಡಗಳಿಗೆ 82 ಅಂಕಗಳು ಲಭಿಸಿದ ಹಿನ್ನಲೆಯಲ್ಲಿ ಗುಡ್ಡೆಹೊಸೂರು-ಬಸವನಹಳ್ಳಿಯ ವೀರಾಂಜನೇಯ ಸೇವಾ ಸಮಿತಿ ಹಾಗೂ ಕೂಡಿಗೆಯ ಹನುಮ ಸೇವಾ ಸಮಿತಿಗೆ ಪ್ರಥಮ ಬಹುಮಾನ ದೊರೆಯಿತು.
ಮುಳ್ಳುಸೋಗೆ ಶ್ರೀ ಚಾಮುಂಡೇಶ್ವರಿ ಉತ್ಸವ ಸಮಿತಿ ಮಂಟಪಕ್ಕೆ 80 ಅಂಕ ಲಭಿಸಿದ್ದು ದ್ವಿತೀಯ ಸ್ಥಾನ ಪಡೆದುಕೊಂಡಿದೆ. 78 ಅಂಕ ಗಳಿಸಿದ ಕುಶಾಲನಗರ ಹೆಚ್.ಆರ್.ಪಿ.ಕಾಲನಿಯ ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿ, ರಾಮಮಂದಿರಕ್ಕೆ ತೃತೀಯ ಸ್ಥಾನ ಲಭಿಸಿದೆ. ಚಿಕ್ಕತ್ತೂರು-ಹಾರಂಗಿ ವೀರಹನುಮ ಸೇವಾ ಸಮಿತಿಗೆ 73 ಅಂಕ, ಬೈಚನಹಳ್ಳಿ ಗೆಳೆಯರ ಬಳಗಕ್ಕೆ 61 ಅಂಕ ಲಭಿಸಿವೆ. ವಿಜೇತರಿಗೆ ಕ್ರಮವಾಗಿ 30+30, 25, 20 ಸಾವಿರ ನಗದು, ಉಳಿದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.