ಕುಶಾಲನಗರ, ಡಿ 11: ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಅವಿಶ್ವಾಸ ನಿರ್ಣಯದಲ್ಲಿ ಅಧಿಕಾರದಿಂದ ಕೆಳಗಿಳಿದ ಅಧ್ಯಕ್ಷೆಯಾದ ಪಿ. ಎಂ. ರುಕ್ಮಿಣಿ ಅವರ ಪತ್ರಿಕೆ ಹೇಳಿಕೆಯನ್ನು ಗುಡ್ಡೆಹೊಸೂರು ಬಿಜೆಪಿ ಶಕ್ತಿ ಕೇಂದ್ರ ಖಂಡಿಸಿದೆ. ಬಿಜೆಪಿ ಪಕ್ಷಕ್ಕೆ ಬಂದು ಬಿಜೆಪಿಯ ಬೆಂಬಲಿತ ಸದಸ್ಯಯಾಗಿ ಆಯ್ಕೆಯಾಗಿ 2ನೇ ಅವಧಿಯಲ್ಲಿ ಹಿಂದುಳಿದ ಎ ವರ್ಗ ಮಹಿಳೆ ಮೀಸಲಾತಿ ಬಂದಾಗ ಮೂರು ಜನ ಆಕಾಂಕ್ಷಿಗಳು ಪ್ರಭಲವಾದ ಬೇಡಿಕೆ ಇಟ್ಟಾಗ ಪಕ್ಷದ ಹಿರಿಯರು ಮೊದಲ ಅವಧಿಗೆ ರುಕ್ಮಿಣಿ ಹಾಗೂ ಎರಡನೆ ಅವಧಿಗೆ ಸೌಮ್ಯರವರನ್ನು ಅಧ್ಯಕ್ಷೆಯಾಗಿ ಮಾಡುವಂತೆ ತೀರ್ಮಾನಿಸಿ ಅಧಿಕಾರ ಹಂಚಲಾಗಿತ್ತು. ನಂತರ ಅವಧಿ ಮುಗಿದ ಮೇಲೆ ರುಕ್ಮಿಣಿ ಅವರು ಅಧಿಕಾರ ಹಸ್ತಾಂತರ ಮಾಡದೆ ಸತಾಯಿಸುತ್ತಾ ಉಢಾಫ ವರ್ತನೆ ತೋರಿ ಪಕ್ಷದ ವಿರುದ್ದ ಮಾತನಾಡುತಿದ್ದಾಗ ಅವರ ದುರಾಡಳಿತದ ಬಗ್ಗೆ ಜನರು ತಿರುಗಿ ಬಿದ್ದಾಗ, ಪಕ್ಷದ ಹಿರಿಯರ ತೀರ್ಮಾನದಂತೆ ಅಧಿಕಾರ ಹಸ್ತಾಂತರ ಮಾಡುವಂತೆ ಕೋರಿದರೂ ಕೂಡ ಸ್ಥಾನ ಬಿಡದೆ ಸತಾಯಿಸುತಿದ್ದಾಗ ಸದಸ್ಯರು ಅವರನ್ನು ಒಮ್ಮತದಿಂದ ಇಳಿಸಿರುತ್ತಾರೆ.
ಅಧಿಕಾರ ಅನುಭವಿಸಿದ ರುಕ್ಮಿಣಿ ಅವರು ಅಧಿಕಾರದಿಂದ ಇಳಿದ ನಂತರ ಅವರ ವರ್ತನೆ ಹಾಗು ನೀಡಿದ ಪತ್ರಿಕಾ ಹೇಳಿಕೆಯನ್ನು ಪಕ್ಷದ ಮುಖಂಡರು ಖಂಡಿಸಿದ್ದಾರೆ. ಬಿಜೆಪಿಯಲ್ಲಿ ಇದ್ದು ಅಧಿಕಾರ ಅನುಭವಿಸಿ ಈಗ ಪಕ್ಷದ ವಿರುದ್ಧ ಮಾತಾಡುತ್ತಿರುವ ಅವರಿಗೆ ಯಾವ ನೈತಿಕತೆ ಇದೆ, ಹಿರಿಯರು ಹಾಗೂ ಹಿಂದುಳಿದ ವರ್ಗದ ಮಹಿಳೆ ಎನ್ನುವ ಕಾರಣಕ್ಕೆ ಪಕ್ಷ ಇವರನ್ನು ಗುರುತಿಸಿ ಅಧ್ಯಕ್ಷೆ ಮಾಡಿತ್ತು. ಇವರಿಗೆ ಪಕ್ಷನಿಷ್ಠೆ ಇದೆಯಾ? ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಇವರು ಭಾಗವಹಿಸುತ್ತಿರಲಿಲ್ಲ ಹಾಗೆ ಪಕ್ಷದ ಯಾವುದೇ ಮುಖಂಡರು ಇವರನ್ನು ಅಗೌರವದಿಂದ ನಡೆಸಿಕೊಂಡಿಲ್ಲ. ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡದೆ ಅಧಿಕಾರದಿಂದ ಕೆಳಗಿಳಿದ ನಂತರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ನೋಡಿದರೆ ಅಸ್ಯಸ್ಪದ ಎಂದು ಪ್ರಮುಖರಾದ ಶಶಿಕುಮಾರ್, ಗ್ರಾಪಂ ಸದಸ್ಯರಾದ ಪ್ರವೀಣ್ ಕುಶಾಲಪ್ಪ, ಪ್ರದೀಪ್ ಸೌಮ್ಯ ಮತ್ತಿತರರು ಖಂಡಿಸಿದ್ದಾರೆ.
Back to top button
error: Content is protected !!