ಕಾರ್ಯಕ್ರಮ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶ್ರದ್ಧಾಂಜಲಿ ಸಭೆ

ಕುಶಾಲನಗರ ಡಿ.12ಇಡೀ ದೇಶದಲ್ಲೇ ಎಸ್.ಎಂ.ಕೃಷ್ಣ ಅಂತಹ ಸಜ್ಜನ ರಾಜಕಾರಣಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ. ಅವರ ದೂರದೃಷ್ಟಿ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚೆಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ಜಂಟಿಯಾಗಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವನ್ನು ವಿಶ್ವದ ಐಟಿ ಬಿಟಿ ಯ ಕೇಂದ್ರ ಸ್ಥಾನ ಮಾಡುವಲ್ಲಿ ಯಶಸ್ವಿಯಾಗಿ ಲಕ್ಷಾಂತರ ವಿದ್ಯಾವಂತ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುವಲ್ಲಿ ಕೃಷ್ಣ ಅವರ ಯೋಚನೆ, ಯೋಜನೆಯ ಫಲ. ಬೆಂಗಳೂರು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿಗೆ ಚಿಂತಿಸಿ ಪ್ಲೈ ಓವರ್, ನಮ್ಮ ಮೆಟ್ರೋ ರೈಲು ಆರಂಭಿಸಿದರು.
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಸರ್ವಕಾಲಕ್ಕೂ ಪ್ರಸ್ತುತವಾಗುವ ರೋಲ್ ಮಾಡೆಲ್. ಕೃಷ್ಣ ಅವರು ಕ್ರೀಡೆ, ಸಾಹಿತ್ಯ, ಸಂಗೀತ, ರಾಜಕೀಯ ಹೀಗೆ ಎಲ್ಲ ಮಜ್ಜಲುಗಳಲ್ಲೂ ತಮ್ಮ ಜ್ಞಾನವನ್ನು ಪ್ರದರ್ಶನ ಮಾಡಿ ಎಲ್ಲ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಚೆಂಬರ್ ಕಾರ್ಯದರ್ಶಿ ಚಿತ್ರ ರಮೇಶ್ ಮಾತನಾಡಿ, ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಶಾಲೆಗಳಲ್ಲಿ ಬಿಸಿಯೂಟ ಆರಂಭಿಸಿ ವಿಧ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡುವಂತೆ ಮಾಡಿದರು. ಮಹಿಳೆಯರು ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಬೇಕು ಎಂದು ಸ್ತ್ರೀ ಶಕ್ತಿ ಯೋಜನೆ, ಆಸ್ಪತ್ರೆ ಖರ್ಚಿಗಾಗಿ ಯಶಸ್ವಿನಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಮಹಾನ್ ಚೇತನ ಎಂದು ವಿವರಿಸಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್, ಗೌಡ ಸಮಾಜದ ಮುಖಂಡ ಪೋನ್ನಚ್ಚನ ಮೋಹನ್ ಇತರರು ಮಾತನಾಡಿದರು.
ಹೆಬ್ಬಾಲೆಯ ಶೇಖರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬೋಸ್ ಮೊಣ್ಣಪ್ಪ, ಎಂ.ಎನ್.ಕಾಳಪ್ಪ, ಕೂಡಿಗೆ ಶ್ರೀನಿವಾಸ್, ಡಿ.ಆರ್.ಸೋಮಶೇಖರ್, ಕೆ.ವಿ.ಉಮೇಶ್, ಎಂ.ಎನ್.ಮೂರ್ತಿ, ಆವರ್ತಿ.ಆರ್.ಮಹದೇವಪ್ಪ, ಬಿ.ಬಿ.ಹೇಮಲತಾ, ಚಂದ್ರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!