ಕುಶಾಲನಗರ ಅ 23: ಕುಶಾಲನಗರದಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ ಹನುಮ ಜಯಂತಿ ಕಾರ್ಯಕ್ರಮಕ್ಕೆ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಭಾಗದ ವೀರಾಂಜನೆಯ ಸೇವಾ ಸಮಿತಿಯ 5 ನೇ ವರ್ಷದ ಹನುಮ ಜಯಂತೋತ್ಸವ ಪೂರ್ವಭಾವಿ ಸಭೆಯು ಗುಡ್ಡೆಹೊಸೂರು ಸಮುದಾಯಭವನದಲ್ಲಿ ಸಮಿತಿಯ ಅಧ್ಯಕ್ಷರಾದ ಅರುಣ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ , ಗುಡ್ಡೆಹೊಸೂರು, ಬಸವನಹಳ್ಳಿ, ಬೆಟ್ಟಗೇರಿ, ಬೊಳ್ಳುರು, 7ನೇ ಹೊಸಕೋಟೆ, ನಂಜರಾಯಪಟ್ಟಣ ಗ್ರಾಮಗಳ ವಿವಿಧ ಘಟಕಗಳ ಪದಾಧಿಕಾರಿಗಳು,ಯು ವಕರ ವೃಂದ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭ ಮುಂದಿನ ಡಿಸೆಂಬರ್ 2 ರಂದು ಹನುಮ ಜಯಂತೋತ್ಸವ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ ಮೊದಲ ಬಹುಮಾನದ ನಿರೀಕ್ಷೆಯಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ಮತ್ತು ಕಳೆದ ಬಾರಿಗಿಂತ ಈ ವರ್ಷ ವಿಶೇಷವಾಗಿ, ಶಿಸ್ತುಬದ್ಧವಾಗಿ ಕಾರ್ಯಕ್ರಮವನ್ನು ನಡೆಸಲು ಹಾಜರಿದ್ದ ಸದಸ್ಯರುಗಳ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ಈ ಸಂಧರ್ಭ ವೀರಾಂಜನೇಯ ಸೇವಾ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್,ಗೌರವ ಅಧ್ಯಕ್ಷರಾದ ಶಶಿಕುಮಾರ್ ಉಪಾಧ್ಯಕ್ಷರಾದ ಪ್ರದೀಪ್, ಕಾರ್ಯದರ್ಶಿ ಉದಯ್ ಕೋಲಿಬೈಲು, ಸಹಕಾರ್ಯದರ್ಶಿ ಕಿಶೋರ್ ಪೂಜಾರಿ, ಉದ್ಯಮಿಗಳಾದ ಕಿರಣ್ ಹಾಗೂ ನವೀನ್, ರವಿ
ಪ್ರಮುಖರಾದ ರಂಜಿತ್, ನಿಶಾಂತ್, ದಿನು, ವಿನು, ದರ್ಶನ್, ರವಿ, ವಿಕ್ರಂ ಸೇರಿದಂತೆ ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯ ಹಾಗೂ ಸಮಿತಿಯ ನೂರಾರು ಸದಸ್ಯರು ಹಾಜರಿದ್ದರು.
Back to top button
error: Content is protected !!