ಕುಶಾಲನಗರ, ಡಿ.9: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ದಿನಂಪ್ರತಿಯಂತೆ ಮಧ್ಯಾಹ್ನ ಸಮಯದಲ್ಲಿ ಮಕ್ಕಳಿಗೆ ಊಟ ಬಡಿಸುವ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿಯ ಕೈ ತಪ್ಪಿನಿಂದ ಅನ್ನಕ್ಕೆ ಸಾಂಬಾರ್ ಬಡಿಸುವ ಸಂದರ್ಭದಲ್ಲಿ ಕೈ ಜಾರಿ ಬಿಸಿ ಸಂಬಾರ್ ಮಗುವಿನ ತೊಡೆಯ ಮೇಲೆ ಚೆಲ್ಲಿದ ಪರಿಣಾಮ ಮಗುವಿನ ತೊಡೆಯ ಅನೇಕ ಕಡೆಗಳಲ್ಲಿ ಸುಟ್ಟ ಗಾಯಗಳಾಗಿ ಬೊಬ್ಬೆ ಗಳು ಬಂದ ಘಟನೆ ನಡೆದಿದೆ.
ಅಂಗನವಾಡಿ ಕೇಂದ್ರ ವ್ಯಾಪ್ತಿಯ ಕೂಡಿಗೆ ಕೊಪ್ಪಲು ಗ್ರಾಮದ ವನಿತಾ ಎಂಬವರ ಪುತ್ರಿ ತನ್ವರ್ಯ (6) ಗಾಯಗೊಂಡ ಮಗು. ಮಗುವಿನ ತೊಡೆಯ ಮೇಲೆ ಬಿದ್ದ ಬಿಸಿ ಸಾಂಬಾರ್ ನಿಂದಾಗಿ ಮಗುವಿನ ಅಳುವು ಮನಕಲಕುವಂತಿತ್ತು.
ಘಟನೆಯಾದ ತಕ್ಷಣವೇ ಅಂಗನವಾಡಿ ಸಿಬ್ಬಂದಿಗಳು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಸ್ಧಳಕ್ಕೆ ಸೋಮವಾರಪೇಟೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀ ದೇವಿ, ಮೇಲ್ವಿಚಾರಕಿ ಸಾವಿತ್ರಮ್ಮ, ರಂಜಿತ ಭೇಟಿ ನೀಡಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಅಂಗವಾಡಿ ಕಾರ್ಯಕರ್ತೆಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಧಳಕ್ಕೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ನಿರ್ದೇಶಕ ಬಿ.ಡಿ. ಅಣ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಯಕರ್ತೆಯನ್ನು ಬೇರೆಡೆಗೆ ಕಳುಹಿಸುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.
Back to top button
error: Content is protected !!