ಕುಶಾಲನಗರ, ಡಿ 07 : ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಸ್ ಅವಘಡದಿಂದ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಕೊಪ್ಪ-ಟಿಬೇಟಿಯನ್ ಕ್ಯಾಂಪ್ ಮಾರ್ಗದಲ್ಲಿ ನಡೆದಿದೆ.
ತಮಿಳುನಾಡು ಮೂಲದ ದೀನ್ ದಯಾಳ್ (21) ಮೃತ ವಿದ್ಯಾರ್ಥಿ. ಗೋಲ್ಡನ್ ಟೆಂಪಲ್ ಗೆ ಆಗಮಿಸಿದ್ದ ಪ್ರವಾಸಿ ಬಸ್ ಮಧ್ಯಾಹ್ನ ಹೋಟೆಲ್ ಒಂದರ ಪಾರ್ಕಿಂಗ್ ನಿಂದ ತಿರುವು ತೆಗೆದುಕೊಳ್ಳುತ್ತಿದ್ದ ಸಂದರ್ಭ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಮುಂಬದಿ ಡೋರ್ ಫುಟ್ ಬೋರ್ಡ್ ನಲ್ಲಿ ನಿಂತಿದ್ದ ದೀನ ದಯಾಳ ಕಂಬದ ನಡುವೆ ಸಿಲುಕಿ ಪ್ರಾಣಬಿಟ್ಟಿದ್ದಾನೆ.