ಸೋಮವಾರಪೇಟೆ, ಡಿ 07::ಪಟ್ಟಣದ ದೇವಾಲಯಗಳಲ್ಲಿ ಷಷ್ಠಿ ಹಬ್ಬದ ಪೂಜೆಯನ್ನು ಶ್ರದ್ಧಾ ಭಕ್ತಿಗಳಿಂದ ನಡೆಸಲಾಯಿತು.
ಕರ್ಕಳ್ಳಿಯ ಕಟ್ಟೆ ಬಸವೇಶ್ವರ ದೇವಾಲಯ ಹಾಗೂ ದೇವಾಲಯದ ಸಮೀಪವಿರುವ ನಾಗಬನದಲ್ಲಿ ಅರ್ಚಕರಾದ ವಿರುಪಾಕ್ಷ ಪುರೋಹಿತ್ವದಲ್ಲಿ ಅರ್ಚನೆ ಯೊಂದಿಗೆ ವಿಶೇಷ ಪೂಜೆ,ಮಹಾಮಂಗಳಾರತಿ ನೆರವೇರಿತು.
ಬೆಳಗಿಂದ ಉಪವಾಸವಿದ್ದ ಭಕ್ತಾದಿಗಳು ನಾಗದೇವರಿಗೆ ಹಾಲು,ಎಳನೀರು,ಅರಿಶಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಪಟ್ಟಣದ ಸೋಮೇಶ್ವರ ದೇವಾಲಯ,ಅಯ್ಯಪ್ಪಸ್ವಾಮಿ ದೇವಾಲಯ, ಮಸಗೂಡು ಗ್ರಾಮದ ದೇವಾಲಯಗಳಲ್ಲಿ ಷಷ್ಟಿಯ ವಿಶೇಷ ಪೂಜೆ ನೆರವೇರಿತು.
Back to top button
error: Content is protected !!