ಕುಶಾಲನಗರ, ಡಿ 02: ನಾಡು, ನುಡಿ,ನೆಲ, ಜಲ, ಭಾಷೆಯ ಪರವಾಗಿ ರಾಜ್ಯದಲ್ಲಿ ಯಾವ ಪಕ್ಷವೂ ಮಾಡಲಾಗದು ಹೋರಾಟ ಕರವೇ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಕುಶಾಲನಗರದ ಕಲಾಭವನದಲ್ಲಿ ಆಯೋಜಿಸಿದ್ದ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಹಾಗೂ ಜಿಲ್ಲಾಮಟ್ಟದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಡು, ನುಡಿ,ನೆಲ, ಜಲ, ಭಾಷೆಯ ಪರವಾಗಿ ಹೋರಾಟ ಮಾಡಿ ಯಾವುದೇ ಶಾಸಕರು ಕೂಡ ಜೈಲುಪಾಲಾದ ಉದಾಹರಣೆಗಳಿಲ್ಲ.
ಇತಿಹಾಸದಲ್ಲಿ ಸಾವಿರಾರು ಹೋರಾಟದ ಮೂಲಕ ಕರವೇ ರಾಜ್ಯದ ಗಡಿಪ್ರದೇಶಗಳಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಅಸ್ತಿತ್ವವನ್ನು ಉಳಿಸಿ ಬೆಳೆಸಿದೆ. ಕಳೆದ 26 ವರ್ಷಗಳಿಂದ ಜೀವದ ಹಂಗು ತೊರೆದು ಕರವೇ ಕಾರ್ಯಕರ್ತರು ಶ್ರಮವಹಿಸಿದ್ದಾರೆ, ಇಂದಿಗೂ ಮಾಡುತ್ತಿದ್ದಾರೆ ಎಂದರು.
ರೈಲ್ವೇ ಇಲಾಖೆಯಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು, ಕನ್ನಡಿಗರಿಗೆ ಉದ್ಯೋಗವಕಾಶ ಒದಗಿಸಲು ಕರವೇ ಪ್ರಮುಖ ಪಾತ್ರ ವಹಿಸಿದೆ.
ಕೊಡಗಿನ ಅಭಿವೃದ್ಧಿ ಪರವಾದ ಬೇಡಿಕೆಗಾಗಿ ಸ್ಥಳೀಯ ಘಟಕ ನಡೆಸುವ ಎಲ್ಲಾ ಹೋರಾಟಗಳಿಗೆ ಸಂಪೂರ್ಣ ಬೆಂಬಲ ಒದಗಿಸುವುದಾಗಿ ನಾರಾಯಣಗೌಡರು ತಿಳಿಸಿದರು.
ಕೊಡಗು ಜಿಲ್ಲಾ ಘಟಕದಿಂದ ಪ್ರತಿ ವರ್ಷ ಓರ್ವ ಸಾಧಕನಿಗೆ ಮಹಾನ್ ದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿನಲ್ಲಿ ಒಂದು ಲಕ್ಷ ಮೊತ್ತದ ವಾರ್ಷಿಕ ಪ್ರಶಸ್ತಿಯನ್ನು ನೀಡಲು ಚಿಂತನೆ ಹರಿಸುವಂತೆ ಕರೆ ನೀಡಿದರು. ಇದಕ್ಕೆ ರಾಜ್ಯ ಘಟಕ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದರು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆ ಬಗ್ಗೆ ರಾಜಕೀಯ ಮುಖಂಡರಿಗಿಂತ ಕನ್ನಡಪರ ಸಂಘಟನೆಗಳಿಗೆ ಪ್ರೀತಿ ಜಾಸ್ತಿ. ಅದರಲ್ಲೂ ಕರವೇ ಕನ್ನಡ ನಾಡು, ನುಡಿ, ಭಾಷೆ ರಕ್ಷಣೆಗೆ, ರಾಜ್ಯದ ಗಡಿಯನ್ನು ಸೈನಿಕನಂತೆ ಸಂರಕ್ಷಿಸುವ ಕೆಲಸ ಮಾಡುತ್ತಾ ಬರುತ್ತಿದೆ. ನಮ್ಮ ಭಾಷೆಯ ಬೆಳವಣಿಗೆ ಬಗ್ಗೆ ಯಾರೂ ಕೂಡ ತಾತ್ಸಾರ ಮನೋಭಾವ ತೋರಬಾರದು ಎಂದು ಕರೆ ನೀಡಿದರು.
ಕರವೇ ಕೊಡಗು ಜಿಲ್ಲಾಧ್ಯಕ್ಷ ದೀಪಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಲ್ಲಾ ಸರಕಾರಗಳಿಂದ ಕೊಡಗು ಜಿಲ್ಲೆ ಕಡೆಗಣನೆಯಾಗುತ್ತಿದೆ.
ಕೊಡಗಿನಲ್ಲಿ ಕರವೇ ಜನಮಾನಸದಲ್ಲಿ ಉಳಿಯಲು ದೊಡ್ಡಮಟ್ಟದ ಹೋರಾಟದ ಅಗತ್ಯವಿದೆ. ಕೊಡಗಿನಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಕರವೇ ಬೃಹತ್ ಹೋರಾಟ ಹಮ್ಮಿಕೊಳ್ಳಲಿದೆ ಎಂದರು.
ಕರವೇ ರಾಜ್ಯ ಮಹಿಳಾ ಘಟಕದ ಗೌರವಾಧ್ಯಕ್ಷೆ ಅಶ್ವಿನಿ ಗೌಡ, ಮಾತನಾಡಿದರು.
ವೇದಿಕೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಪುಟ್ಟಗೌಡ, ವೀರಭದ್ರ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶ್ವೇತಾ ಮೋಹನ್ ಗೌಡ, ಸಂಗೀತಾ ಚಂದನ್ ಗೌಡ, ಸಂಚಾಲಕರಾದ ಗಾಯತ್ರಿ ವಿಜಯೇಂದ್ರ, ದೀಪಾ ಪೂಜಾರಿ, ಮೈಸೂರು ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಹಾಸನ ಜಿಲ್ಲಾಧ್ಯಕ್ಷ ಮನುಗೌಡ, ಮಂಡ್ಯ ಜಿಲ್ಲಾಧ್ಯಕ್ಷ ವೇಣು ಡಿ.ಎಸ್, ಬೆಂಗಳೂರು ಪ್ರಧಾನ ಕಾರ್ಯದರ್ಶಿ ಜೀವಿತ್, ಮೈಸೂರು ನಗರಾಧ್ಯಕ್ಷ ಲೋಕೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ, ಸಾಹಿತಿ ಫ್ಯಾನ್ಸಿ ಮುತ್ತಣ್ಣ, ಜೆಸಿ ಮುಖಂಡ ಎಂ.ಡಿ.ರಂಗಸ್ವಾಮಿ, ಎಸ್.ಕೆ.ಡಿ.ಆರ್.ಡಿ.ಪಿ. ಕೊಡಗು ನಿರ್ದೇಶಕಿ ಲೀಲಾವತಿ, ಯೋಜನಾಧಿಕಾರಿ ರೋಹಿತ್, ಕೊಡಗು ಜಿಲ್ಲಾ ಘಟಕ ಪ್ರಮುಖರಾದ ನಾಗೇಗೌಡ, ಸಂಧ್ಯಾ ಗಣೇಶ್, ಹಾನಗಲ್ ರೂಪಾ ಗಣೇಶ್, ಉದ್ಯಮಿ ಅನಿಲ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕ ಪದಾಧಿಕಾರಿಗಳು ಇದ್ದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ
ಕುಮಾರಿ ದೀಪಕ್, ವನಿತಾ ಚಂದ್ರಮೋಹನ್, ಡಾ.ಮಧುಸೂದನ್, ಧನರಾಜ್, ಕೃಷ್ಣಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಕೊಡಗು ಗಡಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನಾರಾಯಣಗೌಡರು ಮೆರವಣಿಗೆಗೆ ಚಾಲನೆ ನೀಡಿದರು.
Back to top button
error: Content is protected !!