ಕಾರ್ಯಕ್ರಮ

ವೀರಭೂಮಿ ರೆಸಾರ್ಟ್ ನಲ್ಲಿ ಅಡುಗೆ ಅನಿಲ‌ ವಿತರಕರ ಸಮಾವೇಶ-ಅಡುಗೆ ಸ್ಪರ್ಧೆ

ಕುಶಾಲನಗರ, ಡಿ 01 : ಭಾರತ ಸರಕಾರದ ಇಂಧನ ಸಚಿವಾಲಯದ ನಿರ್ದೇಶನದಂತೆ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ವೀರಭೂಮಿ ರೆಸಾರ್ಟ್ ಆವರಣದಲ್ಲಿ ಆಯೋಜಿಸಿದ್ದ ‘ನಮ್ಮ ಅಡುಗೆ ನಮ್ಮ ಜವಾಬ್ದಾರಿ’ ಜಿಲ್ಲಾ ಮಟ್ಟದ ಆಡುಗೆ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

ಜಿಲ್ಲೆಯ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಅಡುಗೆ ಅನಿಲ ವಿತರಕರು ಹಾಗೂ ಸಂಸ್ಥೆ ಪ್ರತಿನಿಧಿಸುವ 11 ಮಂದಿ ಅಡುಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಮಟ್ಟದ ಅಡುಗೆ ಸ್ಪರ್ಧೆಯಲ್ಲಿ ಐಗೂರು ಪಾರ್ವತಿ ಗ್ಯಾಸ್ ನ
ಅರ್ಪಿತಾ ಪ್ರಥಮ ಸ್ಥಾನಗಳಿಸಿದರು.
ಕುಶಾಲನಗರ ಬೆನಕ ಗ್ಯಾಸ್ ನ ಸೌಮ್ಯ ದ್ವಿತೀಯ ಸ್ಥಾನಗಳಿಸಿದರು.
ವಿರಾಜಪೇಟೆ ರವಿರಾಜ್ ಗ್ಯಾಸ್ ನ ಶ್ರೀಲಕ್ಷ್ಮಿ ತೃತೀಯ ಸ್ಥಾನ ಗಳಿಸಿದರು.

ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಅಧಿಕಾರಿ ವಿಘ್ನೇಶ್ ಮಾತನಾಡಿ, ಅಡುಗೆ ಅನಿಲ ಸುರಕ್ಷತಾ ಅಭಿಯಾನದ ಅಂಗವಾಗಿ ನಿಮ್ಮ ಅಡುಗೆ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಿ.
ಲೀಕೇಜ್ ಮತ್ತು ತುರ್ತು ಸಂದರ್ಭ 1906 ಕರೆ ಮಾಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಆಯೋಜಕ ಕುಶಾಲನಗರದ
ಬೆನಕ ಗ್ಯಾಸ್ ನ ಎಂ.ಕೆ.ದಿನೇಶ್ ಮಾತನಾಡಿ, ಕಾರ್ಯಕ್ರಮದ ವಿವರ ನೀಡಿದರು. ಭಾರತದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಹಕರಿಗೆ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಈಗಾಗಲೆ ಹಮ್ಮಿಕೊಳ್ಳಲಾಗಿದೆ. ವಿನೂತನ ರೀತಿಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಅಡುಗೆ ಮನೆಯಲ್ಲಿ ವಹಿಸಬೇಕಾದ ಮುಂಜಾಗ್ರತೆ, ಜವಾಬ್ದಾರಿ ಬಗ್ಗೆ ಇಲ್ಲಿ ತಿಳಿಸಲಾಗಿದೆ ಎಂದರು.

ಈ ಸಂದರ್ಭ ವಿತರಕರಾದ ಮುರುಳೀಧರ್, ಬಹುಮಾನ ವಿಜೇತೆ ಅರ್ಪಿತಾ ಮಾತನಾಡಿದರು.

ತೀರ್ಪುಗಾರರಾಗಿ ಕುಶಾಲನಗರದ ಆಶಾ ಅಶೋಕ್, ವೇಣು ಬಿಳಿಮಗ್ಗ ಕಾರ್ಯನಿರ್ವಹಿಸಿದರು.

ಮನೆಗಳಲ್ಲಿ ಅತಿ ಹೆಚ್ಚು ಸೇಫ್ಟಿ ಚೆಕ್ ನಡೆಸಿ ಮೂರು ಸಂಸ್ಥೆಗಳ ಅನಿಲ ವಿತರಕ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ಕುಶಾಲನಗರ ಬೆನಕ ಗ್ಯಾಸ್ ನ ಶ್ರೀಧರ್, ಗಣೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!