ಕುಶಾಲನಗರ, ಡಿ 01: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ಜಿಲ್ಲೆಯ ಪ್ರೌಢ ಶಾಲೆಗಳು ಹಾಗೂ ಪಿಯು ವಿಭಾಗದ ವಿದ್ಯಾರ್ಥಿಗಳಿಗಾಗಿ ವಚನ ಗಾಯನ ಸ್ಪರ್ಧೆ ಯನ್ಜು ಆಯೋಜಿಸಲಾಗುತ್ತಿದೆ.
ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಚ್ಚು ವಚನಗಳನ್ನು ವಾಚಿಸುವ ವಿದ್ಯಾರ್ಥಿಗಳಿಗೆ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ನಗದು ರೂಪದಲ್ಲಿ 3000, 2000 ಹಾಗೂ 1000 ರೂ. ನೀಡಲಾಗುವುದು. ಜೊತೆಗೆ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಆಕರ್ಷಕವಾದ ಸ್ಮರಣಿಕೆ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು.
ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು 94488 96395 ಮತ್ತು 93808 44173 ಈ ಮೊಬೈಲ್ ನಂಬರ್ ಸಂಪರ್ಕಿಸಿ ಡಿಸೆಂಬರ್ 10 ರೊಳಗಾಗಿ ಹೆಸರು ನೊಂದಾಯಿಸಬೇಕೆಂದು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
Back to top button
error: Content is protected !!