ಕುಶಾಲನಗರ, ನ 17:ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಜಿ ಗ್ರಾಮದ ಕಿರುಮಕ್ಕಿ-ಕಂಡಿಮಕ್ಕಿ ಜಂಕ್ಷನ್‌ನಲ್ಲಿ ನಿಷೇಧಿತ ಮಾದಕ ವಸ್ತು MDMA & ಗಾಂಜಾವನ್ನು ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಬಳಕೆ/ಮಾರಾಟ/ಸರಬರಾಜು ಕುರಿತು ನಮ್ಮ ಕಛೇರಿ/ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಬಳಕೆ/ ಸರಬರಾಜು ಅನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ಮೋಹನ್ ಕುಮಾರ್, ಡಿಎಸ್‌ಪಿ, ವಿರಾಜಪೇಟೆ ಉಪವಿಭಾಗ, ಶ್ರೀ ಅನೂಪ್ ಮಾದಪ್ರ.ಪಿ, ಸಿಪಿಐ, ವಿರಾಜಪೇಟೆ ವೃತ್ತ, ಶ್ರೀ ಪ್ರಮೋದ್, ಪಿಎಸ್‌ಐ, ವಿರಾಜಪೇಟೆ ನಗರ. ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 17-11-2024 ರಂದು ಅರ್ಜಿ ಗ್ರಾಮದ ಕಿರುಮಕ್ಕಿ-ಕಂಡಿಮಕ್ಕಿ ಜಂಕ್ಷನ್‌ನಲ್ಲಿ ನಿಷೇಧಿತ ಮಾದಕ ವಸ್ತುವನ್ನು ಸರಬರಾಜು/ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳ ವಿವರ:
1. ಸುಜೇಶ್.ಎಂ.ಕೆ. 44 ವರ್ಷ, ತಿರುವಂಗಾಡು ಗ್ರಾಮ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ
2. ಜಬ್ಬರ್.ಯು.ವೈ, 38 ವರ್ಷ, ಮರೂರು ಗ್ರಾಮ, ವಿರಾಜಪೇಟೆ.
3. ಮೊಹಮ್ಮದ್ ಕುಂಞ, 48 ವರ್ಷ, ಮರೂರು ಗ್ರಾಮ, ವಿರಾಜಪೇಟೆ.
4. ಜಂಶೀರ್, 37 ವರ್ಷ, ಪಿಣರಾಯಿ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ.
5. ಶಮ್ಯಾಸ್.ಸಿ.ಎ. 32 ವರ್ಷ, ಎರನ್ನೋಳಿ ಗ್ರಾಮ, ತಲಚೇರಿ ಜಿಲ್ಲೆ, ಕೇರಳ ರಾಜ್ಯ
ವಶಪಡಿಸಕೊಂಡ ಸುತ್ತುಗಳ ವಿವರ;
1. 84 ಗ್ರಾಂ MDMA .
2. 07 ಗ್ರಾಂ ಗಾಂಜಾ ಮಾದಕ ವಸ್ತು.
3. ಬಲೇನೋ ಕಾರು.
4. ಡಿಜಿಟಲ್ ತೂಕದ ಯಂತ್ರ – 1
5. ಮಾದಕ ವಸ್ತು ಸೇವನೆಗೆ ಬಳಸುವ ಉಪಕರಣ.
Back to top button
error: Content is protected !!