ಕುಶಾಲನಗರ, ನ 17: ದಿನಾಂಕ: 16-11-2024 ರ ಶನಿವಾರ ಕುಶಾಲನಗರದಲ್ಲಿ ದ್ವಿತೀಯ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಡಗು ಕರ್ನಾಟಕ ಚಾಲಕರ ಒಕ್ಕೂಟ ಕುಶಾಲನಗರ ಇವರ ಆಶ್ರಯದಲ್ಲಿ ನೃತ್ಯ ಶಾಲಾ ಮಕ್ಕಳಿಗೆ ಆಯೋಜನೆ ಮಾಡಲಾಗಿದ್ದ ಜಿಲ್ಲಾ ಮಟ್ಟದ ಮುಕ್ತ ನೃತ್ಯ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಹಲವು ಪ್ರಮುಖ ನೃತ್ಯ ಶಾಲೆಗಳು ಆಗಮಿಸಿದ್ದರು. ಇದರಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಪಟುಗಳು ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿಜೇತರಾದರು ಅಲ್ಲದೆ ನೆರೆದಿದ್ದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಅತಿಥಿಗಳ ಹಾಗೂ ನೆರೆದಿದ್ದ ಜನರ ಮೈ ರೋಮಾಂಚನಗೊಳಿಸುವ ಹಾಗೂ ವೈವಿಧ್ಯಮಯ ನೃತ್ಯ ಪ್ರದರ್ಶನವನ್ನು ನೀಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡರು. ಈ ಕಾರ್ಯಕ್ರಮಕ್ಕೆ ಮಡಿಕೇರಿ ಮಿಲನಾ ಭಾರತ್ ಹಾಗೂ ವಿರಾಜಪೇಟೆಯ ಕಾವ್ಯಶ್ರೀ ರವರು ತೀರ್ಪುಗಾರರಾಗಿದ್ದರು. ಈ ಸಂದರ್ಭ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ವಿ.ಪಿ ಶಶಿಧರ್ ರವರು ವಿಜೇತರಾದ ನೃತ್ಯ ಪಟುಗಳಿಗೆ ವಿಶೇಷ ಬಹುಮಾನ ನೀಡುವುದರೊಂದಿಗೆ ತಂಡಕ್ಕೆ ಅಭಿನಂದಿಸಿದರು. ಈ ಕಾರ್ಯಕ್ರಮದ ಆಯೋಜಕರು ಕೊಡಗು ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಕಾರ್ಯದರ್ಶಿಗಳು ಹಾಜರಿದ್ದರು.
Back to top button
error: Content is protected !!