ಶಿಕ್ಷಣ

ಯುಪಿಎಸ್ಸಿ-ಎನ್ ಡಿಎ ಪರೀಕ್ಷೆಯಲ್ಲಿ ಸೈನಿಕ ಶಾಲೆ ಕೊಡಗಿನ 19 ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕುಶಾಲನಗರ, ನ 04: ಯು ಪಿ ಎಸ್ ಸಿ-ಎನ್ ಡಿ ಎ ಪರೀಕ್ಷೆಯಲ್ಲಿ ಸೈನಿಕ ಶಾಲೆ ಕೊಡಗಿನ 19 ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ತೋರಿದ್ದಾರೆ.
(ಎನ್ ಡಿ ಎ 154ನೇ ಮತ್ತು ಐ ಎನ್ ಎ116ನೇ ಕೋರ್ಸ್)
ಸೈನಿಕ ಶಾಲೆ ಕೊಡಗಿನ 12ನೇ ತರಗತಿಯ 60 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 2024ನೇ ಸಾಲಿನ ಅತ್ಯಂತ ಸ್ಪರ್ಧಾತ್ಮಕವಾದ ಪರೀಕ್ಷೆಯಾದ ಕೇಂದ್ರ ಲೋಕ ಸೇವಾ ಆಯೋಗದ(ಯು ಪಿ ಎಸ್ ಸಿ) ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ ಡಿ ಎ) ಪರೀಕ್ಷೆಯಲ್ಲಿ (ಎನ್ ಡಿ ಎ 154ನೇ ಮತ್ತು ಐ ಎನ್ ಎ116ನೇ ಕೋರ್ಸ್) ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರು ಹೆಮ್ಮೆಯಿಂದ ಘೋಷಿಸಿದರು. ಜೊತೆಗೆ ಈ ಸಾಧನೆಯು ಶಾಲೆಯ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರಸ್ತುತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆಯು ಶ್ಲಾಘನೀಯವಾಗಿದ್ದು ಶೇಕಡವಾರು 31.67ರಷ್ಟು ಸಾಧನೆಯಾಗಿರುತ್ತದೆ. ಪ್ರಸ್ತುತ ಯಶಸ್ಸು ಶಾಲೆಯಲ್ಲಿ ಒದಗಿಸಲಾದ ಧನಾತ್ಮಕವಾಗದ ಮತ್ತು ಪ್ರೇರಣಾದಾಯಕವಾದ ಶೈಕ್ಷಣಿಕ ವಾತಾವರಣದ ಪ್ರತಿಬಿಂಬಿವಾಗಿದೆ ಎಂದರು.
ಶಾಲೆಯು ನಿರಂತರವಾಗಿ ಶೈಕ್ಷಣಿಕ ಉತ್ಕೃಷ್ಟತೆಗೆ ಆದ್ಯತೆ ನೀಡುವುದರೊಂದಿಗೆ, ಭಾರತೀಯ ಸಶಸ್ತ್ರ ಪಡೆಗಳಿಗೆ ಶಾಲಾ ವಿದ್ಯಾರ್ಥಿಗಳನ್ನು ಅಧಿಕಾರಿಗಳಾಗಿ ಸೇರ್ಪಡೆಗೊಳಿಸುವ ಸಿದ್ಧತೆಯನ್ನು ನಿರಂತರವಾಗಿ ನಡೆಸುತ್ತಿದೆ. ಪ್ರಸ್ತುತ ವರ್ಷ ಎನ್ ಡಿ ಎ ಪರೀಕ್ಷೆಗೆ ಸಂಬಂಧಿಸಿದಂತೆ ರಚನಾತ್ಮಕವಾಗಿ ಎನ್ ಡಿ ಎ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಐದು ಹಂತಗಳಲ್ಲಿ ಅಳವಡಿಸಿ ಯಶಸ್ಸನ್ನು ಸಾಧಿಸಲಾಗಿದೆ. ಇದರೊಂದಿಗೆ ಶಾಲೆಯು ಯು ಪಿ ಎಸ್ ಸಿ, ಎನ್ ಡಿ ಎ/ ಐ ಎನ್ ಎ ಪಠ್ಯಕ್ರಮವನ್ನು ಸಮಗ್ರವಾಗಿ ಹೊಂದಿದ್ದು, ವಿದ್ಯಾರ್ಥಿಗಳ ಸಿದ್ಧತೆಗೆ ಅಗತ್ಯವಿರುವ ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಹೊಂದಿರುವುದರೊಂದಿಗೆ ಶಾಲೆಯ ಕೇಂದ್ರೀಕೃತ ಹಾಗೂ ಸಂಘಟಿತ ಪ್ರಯತ್ನವು ಯಶಸ್ಸಿನ ಹೊಸ ಶಿಖರವನ್ನೇರಲು ಕಾರಣವಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು, ಅತ್ಯುತ್ತಮ ಸಾಧನೆಗೈದ ತಮ್ಮ ಶಾಲಾ ವಿದ್ಯಾರ್ಥಿಗಳ ಅಭಿನಂದಿಸುತ್ತಾ, “ಈ ಸಾಧನೆಯು ನಮ್ಮ ವಿದ್ಯಾರ್ಥಿಗಳು ತೋರಿದ ಕಠಿಣ ಪರಿಶ್ರಮ ಮತ್ತು ನಿರಂತರ ತರಬೇತಿಯ ಪ್ರತೀಕವಾಗಿದೆ. ಈ ಪ್ರಯತ್ನವನ್ನು ನಾವು ಪ್ರಾರಂಭಿಕ ದಿನಗಳಿಂದ ವಿದ್ಯಾರ್ಥಿಗಳಲ್ಲಿ ಬೆಳೆಸಿದ ಮೌಲ್ಯಗಳನ್ನು ಮತ್ತು ತತ್ವಗಳನ್ನು ಎತ್ತಿ ತೋರಿಸುತ್ತದೆ. ಹಾಗೂ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಮುಂಬರುವ ಎಸ್ ಎಸ್ ಬಿ ಸಂದರ್ಶನದಲ್ಲಿ ಯಶಸ್ಸನ್ನು ಸಾಧಿಸಲು ನೀವು ಅವಿರತವಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ತೇರ್ಗಡೆಗೊಂಡಿರುವ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಅರ್ಹತೆ ಹೊಂದಿದ್ದು, ಎಸ್‌ ಎಸ್‌ ಬಿ ಸಂದರ್ಶನಕ್ಕೆ ಹಾಜರಾಗಿ ಯಶಸ್ಸು ಪಡೆದ ನಂತರ, ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಎಜಿಮಲ(ಕೇರಳ)ದ ಇಂಡಿಯನ್ ನೇವಲ್ ಅಕಾಡೆಮಿಗೆ ಸೇರಿ, ತಮ್ಮ ತರಬೇತಿಯ ನಂತರ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕಮಿಷನ್ಡ್ ಅಧಿಕಾರಿಯಾಗುತ್ತಾರೆ. ಸೈನಿಕ ಶಾಲೆ ಕೊಡಗು ಭಾರತೀಯ ಸಶಸ್ತ್ರ ಪಡೆಗಳ ವಿವಿಧ ತರಬೇತಿ ಅಕಾಡೆಮಿಗಳಿಗೆ ಉತ್ತಮ ಗುಣಮಟ್ಟದ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಬದ್ಧವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!