ವಿರಾಜಪೇಟೆ: ನ: 03:
ಸಾಲು ಸಾಲು ರಜೆಯನ್ನು ಗಮನಿಸಿದ ಚೋರರ ಗುಂಪು ಒಂದು ರಾಷ್ಟೀಕೃತ ಬ್ಯಾಂಕ್ ಶಾಖೆಗೆ ಕನ್ನ ಹಾಕಿ ಯತ್ನ ವಿಫಲವಾದ ಘಟನೆ ವಿರಾಜಪೇಟೆ ಕಾಕೋಟುಪರಂಬು ನಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮದ ಬ್ಯಾಂಕ್ ಅಫ್ ಬರೋಡ ಶಾಖೆಗೆ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಖದೀಮರು ಬ್ಯಾಂಕ್ ನ ಗೋಡಗೆ ಕನ್ನ ತೊರೆದು ಒಳ ನುಗ್ಗುವ ಪ್ರಯತ್ನ ವಿಫಲವಾಗಿದೆ.ಬ್ಯಾಂಕ್ ಗಳಿಗೆ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಶನಿವಾರ ರವಿವಾರ ಎಂದು ಸಾಲು ಸಾಲು ರಜೆಯಾಗಿತ್ತು. ರಜೆಯಾದ ಕಾರಣ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಗೆ ಆಗಮಿಸುವುದಾಗಲಿ ನೋಡುವುದಾಗಲಿ ಪ್ರಯತ್ನ ಮಾಡುವುದಿಲ್ಲ ಎಂದು ಭಾವಿಸಿದ ಖದೀಮ ತಂಡ ರಾತ್ರಿಯ ವೇಳೆಯಲ್ಲಿ ತನ್ನ ಕೈಚಳಕದಿಂದ ಬ್ಯಾಂಕ್ ನ ಮುಂದೆ ಅಳವಡಿಸಲಾಗಿದ್ದ ಸಿ.ಸಿ. ಕ್ಯಾಮೆರಾವನ್ನು ನಾಶ ಪಡಿಸುತ್ತಾರೆ. ತದ ನಂತರ ವ್ಯವಸ್ಥಾಪಕರ ಕೋಣೆಯ ಗೋಡೆಯ ಮೇಲೆ ರಂದ್ರ ಕೊರೆಯುತ್ತಾರೆ.. ಯಾರಿಗೂ ಸಂದೇಹ ಬಾರದಂತೆ ಕೊರೆದಿರುವ ರಂದ್ರಕ್ಕೆ ಕಾಗದ ಚೂರುಗಳನ್ನು ಅಂಟಿಸಿ ತೆರಳುತ್ತಾರೆ.. ಅಂದರೆ ಮರುದಿನವು ಕಾರ್ಯಚರಣೆ ಮುಂದುವರೆಸಿ ಬ್ಯಾಂಕ್ ನಲ್ಲಿರುವ ಚಿನ್ನ ಆಭರಣ ಮತ್ತು ನಗದು,ದಾಖಲೆ ಪತ್ರಗಳನ್ನು ಕಳ್ಳತನ ಮಾಡುವ ಉದ್ದೇಶ ಇದ್ದಿರಬಹುದು. ದಿನಾಂಕ ೩೦-೧೦-೨೦೨೪ ರಿಂದ ೦೩-೧೧-೨೦೨೪ ರ ವರೆಗೆ ರಜೆ ಹಿನ್ನಲೆಯಾಗಿತ್ತು. ಬ್ಯಾಂಕ್ ವ್ಯವಸ್ಥಾಪಕರು ಬ್ಯಾಂಕ್ ಸಿಬ್ಬಂದಿಯೋರ್ವನಿಗೆ ಬ್ಯಾಂಕ್ ಬಳಿ ತೆರಳಿ ನೋಡಿಕೊಂಡು ಬರವಂತೆ ತಿಳಿಸಿದ್ದಾರೆ. ಸಹ ಸಿಬ್ಬಂದಿಯಾದ ಸುದೀಶ್ ಎಂಬುವವರು ದಿನಾಂಕ ೩೧-೧೦-೨೦೨೪ ರ ಸಂಜೆ ೦೪ ರ ವೇಳೆಯಲ್ಲಿ ತೆರಳಿದ್ದಾರೆ. ಬ್ಯಾಂಕ್ ನ ಸಿ.ಸಿ. ಕ್ಯಾಮರಾ ಸುಟ್ಟು ಕರುಕಲಾದ ಸ್ಥಿತಿಯಲ್ಲಿ ಗೋಚರಿಸಿದೆ. ಸಂದೇಹದಿಂದ ಬ್ಯಾಂಕ್ ಹಿಂಬದಿಗೆ ತೆರಳಿದ್ದಾರೆ ಗೋಡೆಯ ಮೇಲೆ ಕಾಗದ ಪತ್ರಗಳನ್ನು ಅಂಟಿಸಿರುವಂತೆ ಗೋಚರಗೊಂಡಿದೆ. ಕಾಗದ ಪತ್ರಗಳನ್ನು ಅಲುಗಾಡಿಸಿದ ಸಂಧರ್ಭ ಗೋಡೆಯ ಮೇಲೆ ರಂದ್ರ ಮಾಡಿರುವುದು ಬೆಳಕಿಗೆ ಬಂದಿದೆ. ಸಿಬ್ಬಂದಿಯು ವ್ಯವಸ್ಥಾಪಕರೀಗೆ ದೂರವಾಣಿ ಕರೆ ಮಾಡಿ ಕಳ್ಳತನ ಮಾಡಲು ಯತ್ನ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಮಾಹಿತಿ ಪಡೆದ ವ್ಯವಸ್ಥಾಪಕರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬ್ಯಾಂಕ್ ನ ಉನ್ನತ ಅಧಿಕಾರಿಗಳೋಂದಿಗೆ ಘಟನೆ ಯ ಬಗ್ಗೆ ತಿಳಿಸಿದ್ದಾರೆ. ದಿನಾಂಕ ೦೧-೧೧-೨೦೨೪ ರಂದು ಬ್ಯಾಂಕ್ ಆಫ್ ಬರೋಡ ಕಾಕೋಟುಪರಂಬು ಶಾಖೆಯ ವ್ಯವಸ್ಥಾಪಕರಾದ ನವೀನ್ ಕುಮಾರ್ ಎಸ್ ಅವರು ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 331(3),331(4),305(e) 62 ಕಾಯ್ದೆಯಂತೆ ಕಳ್ಳತನ ಕ್ಕೆ ಪ್ರಯತ್ನ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿರುವ ವಿರುದ್ದ ಪೊಲೀಸರಿಂದ ತೀವ್ರ ಸ್ವರೂಪದ ತನಿಖೆ ಆರಂಭಿಸಲಾಗಿದೆ..
Back to top button
error: Content is protected !!