ಸುದ್ದಿಗೋಷ್ಠಿ
ಮುಡಾ ಹಗರಣದ ಬಗ್ಗೆ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಲಿ: ಶಾಸಕ ಎ.ಮಂಜು
ಕುಶಾಲನಗರ, ಅ 18: ಮೈಸೂರಿನ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾದ ಕೂಡ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕಿತ್ತು ಎಂದು ಮಾಜಿ ಸಚಿವ ಅರಕಲಗೂಡು ಶಾಸಕ ಎ.ಮಂಜು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೈಸೂರಿನ ಮೂಡಾ ಪ್ರಕರಣದಲ್ಲಿ ಸುಮಾರು 5 ಸಾವಿರ ಕೋಟಿ ರೂಗಳ ಅಕ್ರಮ ನಡೆದಿದೆ ಎನ್ನಲಾಗಿದ್ದು ಈ ಬಗ್ಗೆ ಪಕ್ಷಾತೀತವಾದ ತನಿಖೆಯಾಗಬೇಕು.
ತಪ್ಪಿತಸ್ಥರು ಯಾರೇ ಆದರೂ, ಅದೆಷ್ಟೇ ಪ್ರಭಾವಿ ಇದ್ದರೂ, ಯಾವುದೇ ಪಕ್ಷದವರಾದರೂ ಕೂಡ ಸೂಕ್ತ ಕ್ರಮ ಜರುಗಿಸಬೇಕಿದೆ.
14 ಸೈಟ್ ಗಳನ್ನು ಹಿಂದುರುಗಿಸಿರುವ ಹಿನ್ನಲೆಯಲ್ಲಿ ಮೇಲ್ನೋಟಕ್ಕೆ ತಪ್ಪು ಗೋಚರಿಸುತ್ತಿದೆ. ಈ ಹಿಂದೆ ಆರೋಪ ಹೊಣೆ ಹೊತ್ತು ಹಲವು ಸಿಎಂ ಗಳು ರಾಜೀನಾಮೆ ನೀಡಿ ಹೊರಬಂದು ದೋಷಮುಕ್ತರಾಗಿ ಅಧಿಕಾರ ಮುನ್ನಡೆಸಿದ ಉದಾಹರಣೆ ಇದೆ.
ಓರ್ವ ಕಾನೂನು ಪಂಡಿತರಾಗಿ ಈ ಹಿಂದೆಲ್ಲಾ ಬೇರೆ ಬೇರೆ ರಾಜಕಾರಣಿಗಳ ರಾಜೀನಾಮೆಗೆ ಒತ್ತಾಯಿಸಿದ್ದ ಸಿದ್ದರಾಮಯ್ಯ ಅವರ ವಿರುದ್ದ
ಮೂಡಾ ಪ್ರಕರಣದಲ್ಲಿ ದೂರು ದಾಖಲಾದ ಹಿನ್ನಲೆಯಲ್ಲಿ ಸಿದ್ದರಾಮಯಯ್ಯ ಕಾನೂನಿಗೆ ತಲೆಭಾಗಿ ರಾಜೀನಾಮೆ ನೀಡಬೇಕಿತ್ತು ಎಂದರು.