ಕುಶಾಲನಗರ, ಅ 14: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ, ಬ್ಯಾಡಗೊಟ್ಟ ಕೂಡಿಗೆ ಡೈರಿ ಸರ್ಕಲ್ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ಮನೆ,ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿತು.
ಚರಂಡಿಯ ವ್ಯವಸ್ಥೆ ಸರಿ ಇಲ್ಲದ ಕಾರಣದಿಂದಾಗಿ ಮಳೆಯ ನೀರು ಮನೆಗಳಿಗೆ ನುಗ್ಗಿ ಅವ್ಯವಸ್ಥೆ ಸೃಷ್ಠಿಸಿತು.
ಭುವನಗಿರಿ ಗ್ರಾಮದ ಶೇಖರ್, ಸಂತೋಷ್, ಸುನಿತಾ ,ಕೂಡಿಗೆ ಡೈರಿ ಸರ್ಕಲ್ ಬಟ್ಟೆ ಅಂಗಡಿಯ ನಾಗರಾಜ್ ಮತ್ತು ಕಾವೇರಿ ಹೋಟೆಲ್ ನ ಮಾಲೀಕ ಚಿಣ್ಣಪ್ಪ ಎಂಬವರ ಮನೆಗಳಿಗೆ ಮಳೆಯ ನೀರು ನುಗ್ಗಿ ವಸ್ತುಗಳು ಹಾಳಾಗಿವೆ. ಬ್ಯಾಡಗೊಟ್ಟ ಗ್ರಾಮ ದೇವಯ್ಯ, ಸತೀಶ್ ಎಂಬವರ ಮನೆಗಳಿಗೂ ಸಹ ಮಳೆ ನೀರು ನುಗ್ಗಿ ಬಾರಿ ನಷ್ಟ ಉಂಟಾಗಿದೆ.
ಸೀಗೆಹೊಸೂರು ಗ್ರಾಮ ಮಹದೇವ, ಲೋಕೇಶ್ ಎಂಬವರ ಭತ್ತದ ಗದ್ದೆಗಳಿಗೆ ಜೇನುಕಲ್ಲು ಬೆಟ್ಟದ ಕಡೆಯಿಂದ ಹರಿದು ಬಂದ ಅಪಾರ ಪ್ರಮಾಣದ ಮಳೆಯ ನೀರಿನ ಸೆಳೆತಕ್ಕೆ ಭತ್ತ ಬೆಳೆಯು ಕೊಚ್ಚಿ ಹೋಗಿದೆ. ಅಲ್ಲದೆ ಮೇಲ್ಬಾಗದ ಜಮೀನಿನ ಮಣ್ಣು ಕಳೆಭಾಗದ ರೈತರ ಜಮೀನಿಗೆ ಆವರಿಸಿದೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಧಳ ಪರಿಶೀಲನೆ ನಡೆಸಿ ಪರಿಹಾರವನ್ನು ನೀಡುವಂತೆ ಸಂತ್ರಸ್ಥರು ಅಗ್ರಹಸಿದ್ದಾರೆ.
ಸ್ಧಳಕ್ಕೆ ಕೂಡಿಗೆ ಗ್ರಾಮ ಪಂಚಾಯತಿ ಸೀಗೆಹೊಸೂರು ವ್ಯಾಪ್ತಿಯ ಸದಸ್ಯ ಅನಂತ್, ಜಯಶ್ರೀ, ಅಭಿವೃದ್ಧಿ ಅಧಿಕಾರಿ ಮಂಜಳಾ, ಕಾರ್ಯದರ್ಶಿ ಪುನೀತ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
Back to top button
error: Content is protected !!